ಬುಧವಾರ, ಮೇ 29, 2024

ಮೇ 31 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ): 110ಕೆ.ವಿ ಮೋಕಾ-ಮೀನಹಳ್ಳಿ ಮಾರ್ಗದ ಲಿಲೋ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11ಕೆ.ವಿ ಮೀನಹಳ್ಳಿ, 110/11ಕೆ.ವಿ ಮೋಕಾ ಮತ್ತು 33/11ಕೆ.ವಿ ಯರ್ರಗುಡಿ ಉಪಕೇಂದ್ರದಲ್ಲಿ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಮೇ 31 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 07 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‍ಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-1 ಬಿ.ಡಿ.ಹಳ್ಳಿ ಐಪಿ ಮಾರ್ಗದ ಮೋಕಾ, ಬಿ.ಡಿ.ಹಳ್ಳಿ ಕೃಷಿ ಪ್ರದೇಶಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಗೋಟೂರು, ಕೆ.ಕೆ.ಹಾಳ್, ಮಸೀದಿಪುರ, ವಣೆನೂರು, ಗುಡುದೂರು ಗ್ರಾಮಗಳು. ಎಫ್-4 ಮೋಕಾ, ಶಿವಪುರ ಐಪಿ ಮಾರ್ಗದ ಶಿವಪುರ, ಅಶೋಕನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ, ಸಂಗನಕಲ್ಲು, ಚಾಗನೂರು ಕೃಷಿ ಪ್ರದೇಶಗಳು. ಎಫ್-5 ವಾಟರ್ ವಕ್ರ್ಸ್ ಮಾರ್ಗದ ಶಿವಪುರ ವಾಟರ್ ವಕ್ರ್ಸ್. ಎಫ್-12 ಬಸರಕೋಡು ಎನ್.ಜೆ.ವೈ ಮಾರ್ಗದ ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಗ್ರಾಮಗಳು. ಎಫ್-13 ಬಸರಕೋಡು ಐಪಿ ಮಾರ್ಗದ ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಕೃಷಿ ಪ್ರದೇಶಗಳು. ಎಫ್-14 ಕಪ್ಪಗಲ್ಲು ಮತ್ತು ಸೋಲಾರ್ ಮಾರ್ಗದ ಶಿವಪುರ, ಅಶೋಕ ನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ, ಚಾಗನೂರು ಗ್ರಾಮಗಳು. ಎಫ್-15 ಮೋಕಾ ಮತ್ತು ಸೋಲಾರ್ ಮಾರ್ಗದ ಮೋಕಾ ಮತ್ತು ಬಿ.ಡಿ.ಹಳ್ಳಿ ಗ್ರಾಮಗಳು. ಎಫ್-1 ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಜಾಲಿಚಿಂತೆ ಕೃಷಿ ಪ್ರದೇಶಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ ಕೃಷಿ ಪ್ರದೇಶಗಳು. ಎಫ್-3 ಹಳೆ ಯರ್ರಗುಡಿ ಐಪಿ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು ಕೃಷಿ ಪ್ರದೇಶಗಳು. ಎಫ್-5 ಸಿಂಧುವಾಳ ಮತ್ತು ಸೋಲಾರ್ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು, ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು. ಎಫ್-6 ಜಾಲಿಹಾಳ್ ಐಪಿ ಮಾರ್ಗದ ಎಂ.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಕೃಷಿ ಪ್ರದೇಶಗಳು. 33ಕೆ.ವಿ ಮಾರ್ಗದ 33 ಕೆ.ವಿ ಎನ್.ಡಿ.ಪಿ.ಎಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು, ಚಾಗನೂರು ಕೃಷಿ ಪ್ರದೇಶಗಳು. ಎಫ್-1 ಮೀನಹಳ್ಳಿ/ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು ಗ್ರಾಮ. ಎಫ್-4 ಎ.ಟಿ.ಪಿ.ಎಸ್ ಚೆಳ್ಳಗುರ್ಕಿ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮ. ಎಫ್-5 ಹಗರಿ ಐಪಿ ಫೀಡರ್ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಕೃಷಿ ಪ್ರದೇಶಗಳು. ಎಫ್-6 ಫೀಡರ್ ಮಾರ್ಗದ ಎ-ಒನ್ ಕೋಲ್ಡ್ ಸ್ಟೋರೆಜ್, ಮೆ.ಜಾನಕಿ ಕಾರ್ಪೋ,ಪ್ರೈ.ಲಿ, ಮೆ.ಬಸಾಯಿ ಸ್ಟೀಲ್ ಪ್ರೈ.ಲಿ, ಮೆ.ಕ್ಲೀನ್ ಮ್ಯಾಕ್ಸ್ ಸೊಲಾರ್, ಕ್ಲೀನ್ ಸೋಲಾರ್, ಮೆ.ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ