ಶನಿವಾರ, ಮೇ 18, 2024

ಮೇ 20 ರಂದು ಕುಡುತಿನಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಮೇ 18 (ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಕುಡುತಿನಿ ಉಪ-ಕೇಂದ್ರದ ಪ್ರದೇಶದಲ್ಲಿ ಶಿಥಿಲಗೊಂಡ ಜೋಡಿ ವಿದ್ಯುತ್ ಕಂಬಗಳ ಬದಲಾಯಿಸುವ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11 ಕೆ.ವಿ ಕುಡುತಿನಿ ಉಪ-ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11 ಕೆ.ವಿ ಮಾರ್ಗಗಳಲ್ಲಿ ಮೇ 20 ರಂದು ಬೆಳಗ್ಗೆ 08 ರಿಂದ ಸಂಜೆ 06 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿರುತ್ತಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು* ಎಫ್-3 ಫೀಡರ್‍ನ 400 ಕೆ.ಪಿ.ಟಿ.ಸಿಎಲ್, ಬಿ.ಪಿ.ಎಸ್ ಫೀಡರ್ ಮಾರ್ಗದ 400 ಕೆ.ವಿ.ಎ ಬಿ.ಪಿ.ಎಸ್ ಕುಡುತಿನಿ, ಎಫ್-4 ಫೀಡರ್‍ನ ಕುಡುತಿನಿ ನಗರ ಫೀಡರ್ ಮಾರ್ಗದ ಕುಡುತಿನಿ ನಗರ, ವೇಣಿ ವೀರಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ