ಮಂಗಳವಾರ, ಮೇ 14, 2024

ಅನಾಧೇಯ ಮೃತ ಮಹಿಳೆಯ ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ಮೇ.14(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಪೇಟೆ ರೈಲು ನಿಲ್ದಾಣದ ಗೂಡ್‍ಶೇಡ್ ಏರಿಯಾದ ರೈಲ್ವೇ ಹಳಿ ಪಕ್ಕದಲ್ಲಿ ಶಿಥೀಲಗೊಂಡು ನಿಂತಿದ್ದ ರೈಲ್ವೆಯ ನಾಲ್ಕನೇ ಬೋಗಿಯಲ್ಲಿ ಸುಮಾರು 17-25 ವರ್ಷದ ಅನಾಮದೇಯ ಮೃತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ. ಮೃತ ದೇಹದ ಚಹರೆ: ಎತ್ತರ 4.7 ಅಡಿ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆ ಬುರುಡೆ, ಮುಖ ಚರ್ಮ ಮತ್ತು ಎಲುಬು ಕೊಳೆತ್ತಿರುತ್ತವೆ. ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದು, ತಲೆಯಲ್ಲಿ ಸುಮಾರು 25 ಇಂಚು ಕಪ್ಪು ಕೂದಲು, ಎರಡು ಕಾಲುಗಳಲ್ಲಿ ಬೆಳ್ಳಿಯಂತೆ ಕಾಣುವ ಕಾಲು ಚೈನ್, ಎರಡು ಮುಂಗೈಯಲ್ಲಿ ಕಪ್ಪು ದಾರ ಹಾಗೂ ಕಾಲುಗಳಲ್ಲಿ ದಾರ ಇರುತ್ತದೆ. ಈ ಮೇಲಿನ ಚಹರೆ ಗುರುತುಗಳುಳ್ಳ ಮೃತ ದೇಹದ ಸಂಬಂಧಿಕರ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ದೂ:08392276063 ಮೊ.94808004771, 9480802131 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ದೂ.08022871291 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ