ಬುಧವಾರ, ಮೇ 22, 2024

ಕುರುಗೋಡು: ಐಟಿಐ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಮೇ 22 (ಕರ್ನಾಟಕ ವಾರ್ತೆ): ಕುರುಗೋಡು ಪಟ್ಟಣದಲ್ಲಿನ ಸರ್ಕಾರಿ ಕೈಗಾರಿಕಾ ಸಂಸ್ಥೆ(ಐಟಿಐ) ವತಿಯಿಂದ 2024-25 ಗೆ ಸಾಲಿಗೆ ವಿವಿಧ ವೃತ್ತಿಗಳಿಗೆ ಆನ್‍ಲೈನ್ ಮೂಲಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ವಿ.ತಿಮ್ಮರಾಜು ಅವರು ತಿಳಿಸಿದ್ದಾರೆ. ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್‍ಗಳ ವಿವರ: 2 ವರ್ಷದ ಎಲೆಕ್ಟ್ರಿಷಿಯನ್ (ಎನ್‍ಸಿವಿಟಿ), 2 ವರ್ಷದ ಫಿಟ್ಟರ್ (ಎನ್‍ಸಿವಿಟಿ), 2 ವರ್ಷದ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ (ಎನ್‍ಸಿವಿಟಿ), 2 ವರ್ಷದ ಅಡ್ವಾನ್ಸ್ ಸಿನ್‍ಸಿ ಮೆಷಿನಿಂಗ್ (ಎನ್‍ಸಿವಿಟಿ). ಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ಹೈ.ಕ (371ಜೆ) ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ ಮತ್ತು ಗ್ರಾಮೀಣ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲಾತಿಗಳು. ಆಸಕ್ತ ವಿದ್ಯಾರ್ಥಿಗಳು ಇಲಾಖೆಯ www.cite.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಆಥವಾ ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 03 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವಿ.ತಿಮ್ಮರಾಜು ಮೊ:9980715718, ಸತೀಶ್.ಡಿ.ಜಿ ಮೊ:9481175925, ಮಹೇಶ್.ಟಿ ಮೊ:7892431265, ಓಬಳೇಶ.ಎಂ ಮೊ:9108127275, ರಾಜಶೇಖರ.ಪಿ.ಜಿ ಮೊ:7975845633 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ