ಗುರುವಾರ, ಮೇ 16, 2024
ಮೇ 18 ರಂದು ಕುರುಗೋಡು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 16(ಕರ್ನಾಟಕ ವಾರ್ತೆ):
ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆವಿ ಕುರುಗೊಡು ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಈ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಮೇ 18 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:
ಎಫ್-1 ಕುರುಗೋಡು ಮಾರ್ಗದ ಕುರುಗೋಡು ನಗರ, ಯಾಲ್ಲಾಪುರ ಕ್ರಾಸ್. ಎಫ್-2 ಗೆಣಿಕೆಹಾಳ್ ಐಪಿ ಫೀಡರ್ (ಎಫ್-14 ಫೀಡರ್) ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಬಸವಪುರ, ಅನ್ನಪೂರ್ಣೇಶ್ವರಿ ಕ್ಯಾಂಪ್, ವದ್ದಟ್ಟಿ ಕ್ರಾಸ್ ಗ್ರಾಮಗಳು. ಎಫ್-3 ಕಲ್ಲುಕಂಭ ಐಪಿ ಫೀಡರ್ ಮಾರ್ಗದ ಲಕ್ಷ್ಮೀಪುರ, ಶ್ರೀನಿವಾಸ ಕ್ಯಾಂಪ್, ಸೋಮಲಾಪುರ, ಯಲ್ಲಾಪುರ ಕ್ರಾಸ್, ಕಲ್ಲುಕಂಭ ಗ್ರಾಮ. ಎಫ್-4 ಹೆಚ್.ವೀರಾಪುರ ಎನ್.ಜೆ.ವೈ ಮಾರ್ಗದ ಹೆಚ್.ವೀರಾಪುರ, ಸೋಮಲಾಪುರ ಕ್ರಾಸ್, ಮಾರುತಿ ಕ್ಯಾಂಪ್, ಹೊಸ ಯಲ್ಲಾಪುರ, ಹಳೇ ಯಲ್ಲಾಪುರ, ಶ್ರೀನಿವಾಸ ಕ್ಯಾಂಪ್, ಲಕ್ಷ್ಮೀಪುರ, ಕಲ್ಲುಕಂಭ, ಚಿಟಿಗಿನಹಾಳ್, ಅರ್ಜುನ್ ಕ್ಯಾಂಪ್, ಮಠದ ಕ್ಯಾಂಪ್, ಕೆರೆಕೆರೆ ಗ್ರಾಮಗಳು.
ಎಫ್-5 ಸಿಂಧಿಗೇರಿ ಐ.ಪಿ ಮಾರ್ಗದ ಬೈಲೂರು, ಮಲ್ಲೇಶ್ವರ ಕ್ಯಾಂಪ್, ಗೋಪಾಲಪುರ ಕ್ಯಾಂಪ್, ಗೂಳೆಪ್ಪ ಮಠ. ಎಫ್-6 ಪಟ್ಟಣ ಸೆರಗು ಐಪಿ ಫೀಡರ್ ಮಾರ್ಗದ ಪಟ್ಟಣ ಸೆರಗು, ಯಲ್ಲಾಪುರ, ಹಳೆ ಯಲ್ಲಾಪುರ ಗುತ್ತಿಗನೂರು. ಮಾರುತಿಕ್ಯಾಂಪ್. ಎಫ್-7 ಬಾದನಹಟ್ಟಿ ಐ.ಪಿ ಮಾರ್ಗದ ಬಾದನಹಟ್ಟಿ, ವದ್ದಟ್ಟಿ, ಯರ್ರಂಗಳಿ, ಸಿಂಧಿಗೇರಿ, ಯರ್ರಂಗಳಿ, ಮಾರುತಿ ಕ್ಯಾಂಪ್, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್. ಎಫ್-8 ಎಲ್.ಐ.ಎಸ್ ಎನ್.ಜೆ.ವೈ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ, ಕ್ಯಾದಿಗೆಹಾಳ್ ಕ್ರಾಸ್, ಗೂಳೆಪ್ಪ ಮಠ.
ಎಫ್-9 ಬಾದನಹಟ್ಟಿ ಎನ್.ಜೆ.ವೈ ಮಾರ್ಗದ ಬಾದನಹಟ್ಟಿ, ವದ್ದಟ್ಟಿ ಕ್ರಾಸ್, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್, ಯರ್ರಂಗಳಿ, ಕೃಷ್ಣನಗರ ಕ್ಯಾಂಪ್, ರಾಮಬಾಬು ಕ್ಯಾಂಪ್, ಅನ್ನಪೂರ್ಣೇಶ್ವರಿ ಕ್ಯಾಂಪ್, ಯರ್ರಂಗಳಿ, ಮಾರುತಿ ಕ್ಯಾಂಪ್. ಎಫ್-11 ಚಿಟಿಗಿನಹಾಳ್ ಐ.ಪಿ ಮಾರ್ಗದ ಚಿಟಿಗಿನಹಾಳ್, ಸೋಮಲಾಪುರ, ಹೆಚ್.ವೀರಾಪುರ. ಎಫ್-12 ಕಲ್ಲುಕಂಭ, ಕೆರೆ ಐ.ಪಿ ಮಾರ್ಗದ ಕಲ್ಲುಕಂಭ, ಕೆರೆಕೆರೆ, ಮುಷ್ಟಗಟ್ಟ ಗ್ರಾಮ. ಎಫ್-13 ಕ್ಯಾದಿಗೆಹಾಳ್ ಐ.ಪಿ ಮಾರ್ಗದ ಕ್ಯಾದಿಗೆಹಾಳ್, ಕ್ಯಾದಿಗೆಹಾಳ್ ಕ್ರಾಸ್, ಗೆಣಿಕೆಹಾಳ್, ಮುಷ್ಟಗಟ್ಟ ಗ್ರಾಮ ಹಾಗೂ ಎಫ್-15 ಸೋಲಾರ್ ಫೀಡರ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ