ಸೋಮವಾರ, ಮೇ 13, 2024

ವ್ಯಕ್ತಿ ಕಾಣೆ

ಬಳ್ಳಾರಿ,ಮೇ 13(ಕರ್ನಾಟಕ ವಾರ್ತೆ): ನಗರದ ಕಪ್ಪಗಲ್ಲು ರಸ್ತೆಯ ಶಿವಲಿಂಗಮ್ಮ ಮಠದ ಹತ್ತಿರದ ವಾರ್ಡ್ ನಂ.24 ರ ನಿವಾಸಿ ಕೆ.ಮಲ್ಲಿಕಾರ್ಜುನ ಎನ್ನುವ 42 ವರ್ಷದ ವ್ಯಕ್ತಿಯು ಜ.18 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5.8 ಅಡಿ, ಸಾಧಾರಣ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ಬಲಗೈ ಮೇಲೆ ಮೀನ ಮತ್ತು ಬಸಮ್ಮ ಎಂದು ಅಚ್ಚೆ ಗುರುತು ಇರುತ್ತದೆ. ಎಡಗೈ ಮುಂಗೈ ಮೇಲೆ ಸುಟ್ಟ ಗಾಯ ಇದ್ದು, ಎಡಪಾದಕ್ಕೆ ಹಳೇ ಗಾಯದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಕಂದು ಮತ್ತು ಗ್ರೇ ಬಣ್ಣದ ಕೆಂಪು ಹೂವು ಡಿಸೈನ್‍ವುಳ್ಳ ತುಂಬುತೋಳಿನ ಅಂಗಿ ಹಾಗೂ ಹಸಿರು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ