ಮಂಗಳವಾರ, ಏಪ್ರಿಲ್ 22, 2025
ಏ.26 ರಿಂದ ಕಾಲುಬಾಯಿ ಜ್ವರ ಹಾಗೂ ಚರ್ಮಗಂಟು ರೋಗದ ಉಚಿತ ಲಸಿಕೆ ಅಭಿಯಾನ
ಬಳ್ಳಾರಿ,ಏ.22(ಕರ್ನಾಟಕ ವಾರ್ತೆ):
ಜಿಲ್ಲೆಯಾದ್ಯಂತ ಏಪ್ರಿಲ್ 26 ರಿಂದ ಜೂನ್ 06 ರವರೆಗೆ ಕೇಂದ್ರ ಪುರಸ್ಕೃತ ಎನ್‌ಎಡಿಸಿಪಿ ಯೋಜನೆಯಡಿ 7ನೇ ಸುತ್ತಿನ ಕಾಲುಬಾಯಿ ಜ್ವರದ ಹಾಗೂ ಚರ್ಮಗಂಟು ರೋಗದ ಉಚಿತ ಲಸಿಕೆ ಅಭಿಯಾನ ನಡೆಯಲಿದ್ದು, ಅಭಿಯಾನದಲ್ಲಿ ರೈತರು ತಮ್ಮ ಜಾನುವಾರು ಮತ್ತು ಸಾಕು ಪ್ರಾಣಿಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಹನುಮಂತ ಕಾರಬಾರಿ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ 20ನೇ ಜಾನುವಾರು ಗಣಿತಿಯನ್ವಯ 1,14,577 ದನಗಳು, 66034 ಎಮ್ಮೆಗಳು ಸೇರಿ ಒಟ್ಟು 1,80,611 ದನ ಮತ್ತು ಎಮ್ಮೆಗಳಿವೆ. ಕಾಲು ಬಾಯಿ ಜ್ವರವು ಹಸು, ಎತ್ತು, ಎಮ್ಮೆ, ಹೋರಿ ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾಗಿದ್ದು, ಮುಖ್ಯವಾಗಿ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವುದರಿAದ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ವರ್ಷಕ್ಕೆ ಎರಡು ಬಾರಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ರೈತರು ತಮ್ಮ ದನ ಮತ್ತು ಎಮ್ಮೆಗಳಿಗೆ ಕಾಲು ಬಾಯಿ ರೋಗದ ಲಸಿಕೆಯನ್ನು ನಾಲ್ಕು ತಿಂಗಳು ಮೇಲ್ಪಟ್ಟ ದನ ಮತ್ತು ಎಮ್ಮೆಗಳಿಗೆ ತಪ್ಪದೇ ಹಾಕಿಸಬೇಕು ಎಂದು ತಿಳಿಸಿದ್ದಾರೆ.
ಅದೇರೀತಿಯಾಗಿ ಚರ್ಮಗಂಟು ರೋಗವು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ರೋಗವು ಮುಖ್ಯವಾಗಿ ದನಗಳಲ್ಲಿ ಮಾತ್ರ ಕಂಡುಬರುವುದರಿAದ ದನಗಳಿಗೆ ಮಾತ್ರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ತಮ್ಮ ದನಗಳಿಗೆ ಮಾತ್ರ ಚರ್ಮ ಗಂಟು ರೋಗದ ಲಸಿಕೆ ಹಾಕಿಸಬೇಕು.
ರಾಸುಗಳು ಈ ರೋಗಗಳಿಂದ ಮುಕ್ತವಾದರೂ ಸಹ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆ ಹಾಗೂ ಇತರೆ ಅನೇಕ ತೊಂದರೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಜಿಲ್ಲೆಯ ಎಲ್ಲಾ ರೈತರು ಕಾಲುಬಾಯಿ ಜ್ವರ ಲಸಿಕೆ ಹಾಗೂ ಚರ್ಮಗಂಟು ರೋಗ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮೆಲ್ಲ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ