ಶನಿವಾರ, ಏಪ್ರಿಲ್ 19, 2025

ಬಿಎಸ್‌ಎನ್‌ಎಲ್: ಮೂರು ದಿನಗಳ ಕಾಲ ಗ್ರಾಹಕರ ಸೇವಾ ಶಿಬಿರ

ಬಳ್ಳಾರಿ,ಏ.19(ಕರ್ನಾಟಕ ವಾರ್ತೆ): ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಪ್ರಧಾನ ವ್ಯವಸ್ಥಾಪಕರ ಕಚೇರಿ ವತಿಯಿಂದ ಗ್ರಾಹಕರ ವಿವಿಧ ಟೆಲಿಕಾಂ ಗ್ರಾಹಕ ಸೇವಾ ಸಮಸ್ಯೆಗಳನ್ನು ಬಗೆಹರಿಸಲು ಏ.21, ಏ.24 ಮತ್ತು ಏ.29 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಬಳ್ಳಾರಿ ಕಚೇರಿ ಮತ್ತು ಹೊಸಪೇಟೆಯ ಕೆಕೆಆರ್‌ಟಿಸಿ ಬಸ್ ನಿಲ್ದಾಣ ಎದುರುಗಡೆಯ ಕಚೇರಿಯಲ್ಲಿ ‘ಗ್ರಾಹಕರ ಸೇವಾ ಶಿಬಿರ’ಗಳನ್ನು ಆಯೋಜಿಸಲಾಗುತ್ತಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ವು ಸಾರ್ವಜನಿಕರ ದೂರಸಂಪರ್ಕ ಸೇವಾ ಪೂರೈಕೆದಾರರಿಗಾಗಿ ಏಪ್ರೀಲ್ ಮಾಹೆಯನ್ನು ‘ಕನ್ನೆಕ್ಟಿಂಗ್ ವಿಥ್ ಕೇರ್’ ಎಂಬ ಥೀಮ್ ನೊಂದಿಗೆ ಗ್ರಾಹಕ ಸೇವಾ ಮಾಸವನ್ನಾಗಿ ಆಚರಿಸುತ್ತಿದೆ. ಗ್ರಾಹಕರು ತಮ್ಮ ಸೇವೆಗಳಲ್ಲಿ ಶ್ರೇಷ್ಠತೆ ತರಲು ಬಿಎಸ್‌ಎನ್‌ಎಲ್ ಕ್ಯಾಂಪ್ ಕಚೇರಿ ಮತ್ತು ಡಿಜಿಟಲ್ ದೂರು-ಟ್ರಾö್ಯಕಿಂಗ್ ಪೋರ್ಟಲ್ http://cfp.bsnl.co.in ಮೂಲಕ ತಮ್ಮ ಪ್ರತಿಕ್ರಿಯೆ ನೀಡಬಹುದು. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕ ಡಿ.ಶ್ರೀಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ