ಮಂಗಳವಾರ, ಏಪ್ರಿಲ್ 29, 2025

*ಅನಧೀಕೃತ ಗೈರು; ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ*

ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ಮೆಟ್ರಿಕಿ ಬಿ.ಒ ನ ಜಿಡಿಎಸ್ ಬಿಪಿಎಂ ರವಿಕುಮಾರ್. ಎ ಅವರು 2020 ರ ಫೆ.04 ರಿಂದ ತಮ್ಮ ಕೆಲಸಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿದ್ದು, ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಪಿ.ಚಿದಾನಂದ ಅವರು ತಿಳಿಸಿದ್ದಾರೆ. ಈಗಾಗಲೇ ಇಲಾಖೆಯ ನಿಯಮಾನುಸಾರ ರವಿಕುಮಾರ್ ಗೆ ತಮ್ಮ ಆರೋಪ ಪಟ್ಟಿಯನ್ನು ಅಂಚೆಯ ಮೂಲಕ ಇಲಾಖೆಗೆ ತಿಳಿದಿರುವ ಎಲ್ಲಾ ವಿಳಾಸಗಳಿಗೆ ಕಳುಹಿಸಲಾಗಿದ್ದು, ಅವು ಬಟವಾಡೆಯಾಗದೇ ಹಿಂತಿರುಗಿ ಬಂದಿರುತ್ತವೆ. ಹಾಗಾಗಿ ಈ ಬಗ್ಗೆ ಮತ್ತೊಮ್ಮೆ ಅವಕಾಶ ನೀಡುವ ಸಲುವಾಗಿ ಈ ಪ್ರಕಟಣೆಗೊಂಡ 15 ದಿನಗಳೊಳಗಾಗಿ ಖುದ್ದಾಗಿ ಮೆಮೋ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ಗೈರು ಹಾಜರಿಯಲ್ಲಿ ಇಲಾಖೆಯ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಂಡು ಇತ್ಯರ್ಥಪಡಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ