ಗುರುವಾರ, ಏಪ್ರಿಲ್ 17, 2025

ಮೀನುಗಾರಿಕೆ ಇಲಾಖೆ: ಕೆರೆಗಳ ನವೀಕರಣ ಮೊತ್ತ ಪಾವತಿಸಲು ಸೂಚನೆ

ಬಳ್ಳಾರಿ,ಏ.17(ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆ ವ್ಯಾಪ್ತಿಯ ಕೆರೆಗಳ ಮೀನು ಪಾಶುವಾರು ಹಕ್ಕಿನ ಗುತ್ತಿಗೆದಾರರು/ಬಿಡ್ ದಾರರು 2025-26 ನೇ ಸಾಲಿಗೆ ಗುತ್ತಿಗೆ/ಬಿಡ್ ಮೊತ್ತ ಪಾವತಿಸಬೇಕು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ. ಗುತ್ತಿಗೆ/ಬಿಡ್ ಮೊತ್ತ ಪಾವತಿಸಲು ಏ.30 ಕೊನೆಯ ದಿನ ಆಗಿದೆ. ಗುತ್ತಿಗೆ/ಬಿಡ್ ಮೊತ್ತವನ್ನು ಸಂಬAಧಿಸಿದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ಕೆರೆಯ ಮೀನು ಪಾಶುವಾರು ಹಕ್ಕನ್ನು ರದ್ಧತಿಗೆ ಕ್ರಮವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ