ಶುಕ್ರವಾರ, ಏಪ್ರಿಲ್ 25, 2025
ಸಂಡೂರು ಪುರಸಭೆ: ಅರ್ಜಿ ಆಹ್ವಾನ
ಬಳ್ಳಾರಿ,ಏ.25(ಕರ್ನಾಟಕ ವಾರ್ತೆ):
ಸಂಡೂರು ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ರಡಿ ಐಇಸಿ ಚಟುವಟಿಕೆ ಕೈಗೊಳ್ಳಲು ಸ್ವಸಹಾಯ ಗುಂಪು ಸದಸ್ಯರ ನೇಮಕಾತಿಗಾಗಿ ಆಸಕ್ತಿಯುಳ್ಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಡೂರು ಪುರಸಭೆ ವ್ಯಾಪ್ತಿಯಲ್ಲಿ 03 ವರ್ಷಗಳವರೆಗೆ ಪೂರ್ಣಾವಧಿಗೆ ಐಇಸಿ ಚಟುವಟಿಕೆ ಕೈಗೊಳ್ಳಲು ಆಸಕ್ತಿ ಹೊಂದಿರುವ ನಲ್ಮ್ ಡೇ ಅಥವಾ ಎನ್‌ಆರ್‌ಎಲ್‌ಎಂ ಅಡಿ ನೋಂದಾಯಿತ ಸ್ವ-ಸಹಾಯ ಗುಂಪು ಸದಸ್ಯರು ನಿಗಧಿತ ದಾಖಲಾತಿಗಳೊಂದಿಗೆ ಸಂಡೂರು ಪುರಸಭೆ ಕಚೇರಿಗೆ ಮೇ 03 ರೊಳಗೆ ಅರ್ಜಿ ಸಲ್ಲಿಸಬಹುದು.
ಸ್ವಚ್ಚ ಭಾರತ್ ಮಿಷನ್ ನ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿರುವ ಆಸಕ್ತಿ, ಜ್ಞಾನಕೌಶಲ್ಯ, ಕಂಪ್ಯೂಟರ ಜ್ಞಾನ ಮತ್ತು ಮಾಹಿತಿಯ ಕುರಿತು ನಿರ್ಣಯಿಸಲು ಜಿಲ್ಲಾ ಮಟ್ಟದಲ್ಲಿ ಸಂದರ್ಶನವನ್ನು ಆಯೋಜಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಆಯ್ಕೆ ಪ್ರಕ್ರಿಯೆ ಮತ್ತು ಗೌರವಧನಕ್ಕೆ ಸಂಬAಧಿಸಿದ ಇತರೆ ವಿವರಗಳಿಗಾಗಿ ಸಂಡೂರು ಪುರಸಭೆಯ ಪರಿಸರ ಅಭಿಯಂತರ ಕಚೇರಿ ಅಥವಾ ದೂ.08395-260275 ಗೆ ಸಂಪರ್ಕಿಸಬಹುದು ಎಂದು ಸಂಡೂರು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ