ಗುರುವಾರ, ಏಪ್ರಿಲ್ 17, 2025
ಸಿರುಗುಪ್ಪ: ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ವಕ್ಫ್ ಸಂಸ್ಥೆಯ ಕಾರ್ಯಾಕಾರಿ ಸಮಿತಿಗೆ ಚುನಾವಣೆ
ಬಳ್ಳಾರಿ,ಏ.17(ಕರ್ನಾಟಕ ವಾರ್ತೆ):
ಸಿರುಗುಪ್ಪ ಪಟ್ಟಣದಲ್ಲಿರುವ ವಕ್ಫ್ ಸಂಸ್ಥೆಯಾದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ವಕ್ಫ್ ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಏ.21 ರಿಂದ ಮೇ 10 ರ ವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಸಿರುಗುಪ್ಪದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಆಡಳಿತಾಧಿಕಾರಿ ನೂರ್ ಪಾಷಾ ಅವರು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಚುನಾವಣಾ ನಾಮಪತ್ರವನ್ನು ಏ.21 ರ ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 2.30 ಗಂಟೆವರೆಗೆ ಸಿರುಗುಪ್ಪದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಕಚೇರಿಯಿಂದ ಪಡೆದು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಏ.27 ರ ಮಧ್ಯಾಹ್ನ 2.30 ಗಂಟೆಯೊಳಗೆ ಸಲ್ಲಿಸಬಹುದು.
ಏ.28 ರ ಬೆಳಿಗ್ಗೆ 11.30 ಗಂಟೆಯಿAದ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.29 ರ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ಇರುತ್ತದೆ. ಅದೇ ದಿನ ಮಧ್ಯಾಹ್ನ 03.30 ಗಂಟೆಯ ನಂತರ ಚುನಾವಣಾ ಚಿನ್ಹೆಗಳ ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಮೇ 10 ರ sಶನಿವಾರ ಬೆಳಿಗ್ಗೆ 08 ಗಂಟೆಯಿAದ ಮಧ್ಯಾಹ್ನ 03 ಗಂಟೆಯವರೆಗೆ ಸಿರುಗುಪ್ಪ ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ)ವಕ್ಫ್ ಸಂಸ್ಥೆಗೆ ಚುನಾವಣೆ ನಡೆಸಿ, ಅದೇ ದಿನ ಸಂಜೆ 04 ಗಂಟೆಯಿAದ ಮತ ಎಣಿಕೆ ನಡೆಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ