ಮಂಗಳವಾರ, ಜುಲೈ 29, 2025
ಆ.02 ರಂದು “ಹಾಡಿರೇ ರಾಗಗಳ-ತೂಗಿರೇ ದೀಪಗಳ” ಸಂಗೀತ ಗಾಯನ ಕಾರ್ಯಕ್ರಮ
ಬಳ್ಳಾರಿ,ಜು.29(ಕರ್ನಾಟಕ ವಾರ್ತೆ):
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ “ಹಾಡಿರೇ ರಾಗಗಳ-ತೂಗಿರೇ ದೀಪಗಳ” ಸಂಗೀತ ಗಾಯನ ಕಾರ್ಯಕ್ರಮವನ್ನು ಆ.02 ರಂದು ಸಂಜೆ 06 ಗಂಟೆಗೆ ನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಸಾಂಸ್ಕçತಿಕ ಸಮುಚ್ಚಯದ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಬಯಲು ರಂಗಮAದಿರದಲ್ಲಿ ಆಯೋಜಿಸಲಾಗಿದೆ.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಜೆ.ಎನ್ ಗಣೇಶ್, ಸಂಸದರಾದ ಈ.ತುಕಾರಾಂ, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕ ಬಿ.ನಾಗೇಂದ್ರ, ವಿಧಾನಪರಿಷತ್ ಶಾಸಕ ಡಾ.ಚಂದ್ರಶೇಖರ್ ಬಿ.ಪಾಟೀಲ, ಶಾಸಕರಾದ ಬಿ.ಎಂ.ನಾಗರಾಜ, ಈ.ಅನ್ನಪೂರ್ಣ, ವಿಧಾನಪರಿಷತ್ ಶಾಸಕರಾದ ಶಶೀಲ್ ನಮೋಶಿ, ವೈ.ಎಂ.ಸತೀಶ್, ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
*ಸಂಗೀತ ಗಾಯನ:*
ಬಳ್ಳಾರಿಯ ಎಸ್.ಎಂ ಹುಲುಗಪ್ಪ ಅವರ ತಂಡದಿAದ ಜಾನಪದ ಗೀತೆಗಳು, ಸಿರುಗುಪ್ಪದ ಅಂಬಣ್ಣ ದಳವಾಯಿ ಅವರಿಂದ ಸುಗಮ ಸಂಗೀತ, ಬಳ್ಳಾರಿಯ ಕೆ.ಜಡೇಶ್ ಅವರಿಂದ ಭಾವ ಗೀತೆಗಳು, ಸಿರುಗುಪ್ಪ ತಾಲ್ಲೂಕಿನ ಉತ್ತನೂರಿನ ರಾಮಪ್ಪ ಅವರಿಂದ ರಂಗ ಗೀತೆಗಳು, ಕುರುಗೋಡು ತಾಲ್ಲೂಕಿನ ಕಲ್ಲುಕಂಬದ ಬಿ.ಆನಂದ ಅವರಿಂದ ಕ್ರಾಂತಿ ಗೀತೆಗಳು, ಸಂಗನಕಲ್ಲಿನ ಉಷಾ ಅವರಿಂದ ವಚನ ಗೀತೆಗಳು, ರ‍್ರಗುಡಿಯ ಸುಂಕಪ್ಪ ಹೆಚ್.ಜಿ ಅವರಿಂದ ಹೋರಾಟ ಗೀತೆಗಳು, ಇಬ್ರಾಹಿಂಪುರದ ಹೆಚ್. ರ‍್ರಿಸ್ವಾಮಿ ಅವರಿಂದ ಕ್ರಾಂತಿ ಗೀತೆಗಳು, ಕುರುಗೋಡಿನ ಕೆ. ಹನುಮಂತಪ್ಪ ಜೋಗಿ ಅವರಿಂದ ಕಿನ್ನರಿ ಜೋಗಿ ಪದಗಳು, ಕಂಪ್ಲಿ ತಾಲ್ಲೂಕಿನ ಮೆಟ್ರಿಯ ಸಿ.ಡಿ.ಮೌನೇಶ್ ಅವರಿಂದ ತತ್ವಪದ ಮತ್ತು ದಾಸರ ಪದಗಳು, ಸಂಡೂರು ತಾಲ್ಲೂಕಿನ ಭುಜಂಗನಗರದ ತಾಯಪ್ಪ ಅವರಿಂದ ಹಿಂದುಸ್ತಾನಿ ಶಾಸ್ತಿçÃಯ ಸಂಗೀತ, ಸಂಗನಕಲ್ಲಿನ ಮಾರೆಮ್ಮ ಅವರಿಂದ ಸಂಪ್ರದಾಯ ಗೀತೆಗಳು, ಸಿರುಗುಪ್ಪ ತಾಲ್ಲೂಕಿನ ಅರಳಿಗನೂರಿನ ನೀಲಗಂಗಮ್ಮ ಅವರಿಂದ ಶೋಭಾನೆ ಪದಗಳು ಸೇರಿದಂತೆ ವಿವಿಧ ಸಂಗೀತ ಗಾಯನ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ