ಶುಕ್ರವಾರ, ಜುಲೈ 25, 2025
ಮೃತ ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಬಳ್ಳಾರಿ ಗಾಂಧಿನಗರ ಪೋಲಿಸ್ ಠಾಣೆ ವ್ಯಾಪ್ತಿಯ ತಾಳೂರು ರಸ್ತೆಯ ಹೊಸ ಕೋರ್ಟ್ ಪಕ್ಕದಲ್ಲಿ ಹಾದು ಹೋಗುವ ಹೆಚ್.ಎಲ್.ಸಿ 14 ಡಿಪಿ ಕಾಲುವೆಯಲ್ಲಿ ಸುಮಾರು 55 ಮತ್ತು 40 ವರ್ಷದ ಅನಾಮಧೇಯ ವ್ಯಕ್ತಿಯು ಶವ ತೇಲಿಕೊಂಡು ಬಂದಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಪೊಲೀಸ್ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು:
ಎತ್ತರ 5.5 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ಧೃಡವಾದ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಕೂದಲು ಹೊಂದಿರುತ್ತಾನೆ. ಮೃತನ ಮೈಮೇಲೆ ಗ್ರೇ ಬಣ್ಣದ ಆಫ್ ಟಿ-ಶರ್ಟ್ ಮತ್ತು ಕಪ್ಪು ಬಣ್ಣದ ಸ್ಯಾಂಡೋ ಬನಿಯಾನ್ ಮತ್ತು ನೀಲಿ ಬಣ್ಣದ ಒಳುಡುಪು ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, 258102 ಅಥವಾ ಗಾಂಧಿನಗರ ಪೊಲೀಸ್ ಠಾಣೆಯ ದೂ.08392-272192, ಪಿ.ಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ