ಮಂಗಳವಾರ, ಜುಲೈ 22, 2025
ಆ.22 ರಂದು ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆ
ಬಳ್ಳಾರಿ,ಜು.22(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ನವುಲಟ್ಟಿ (ವಿಠ್ಠಲ ನಗರ) ಗ್ರಾಮದ “ನವುಲಟ್ಟಿ ಕಬ್ಬಿಣದ ಅದಿರಿನ ಗಣಿ ಬ್ಲಾಕ್-4” ರಲ್ಲಿ ಮೆ.ಆರ್.ಪ್ರವೀಣ್ ಚಂದ್ರ ಇವರು ವಾರ್ಷಿಕ 1,48,000 ಟನ್ ಉತ್ಪಾದನಾ ಸಾಮರ್ಥ್ಯ ಕಬ್ಬಿಣದ ಗಣಿಗಾರಿಕೆ ಯೋಜನೆಯನ್ನು ಒಟ್ಟು 40.04 ಹೆಕ್ಟೇರ್ ಹರಾಜು ಅರಣ್ಯ ಪ್ರದೇಶದಲ್ಲಿ ಕೈಗೊಳ್ಳಲು ಉದ್ದೇಶಿಸಿರುತ್ತಾರೆ. ಇದರ ಸಂಬAಧ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 22 ರಂದು ರಂದು ಬೆಳಿಗ್ಗೆ 11 ಗಂಟೆಗೆ ಸಂಡೂರು ತಾಲ್ಲೂಕಿನ ನವುಲಟ್ಟಿ (ವಿಠ್ಠಲ ನಗರ) ಗ್ರಾಮದ “ನವುಲಟ್ಟಿ ಕಬ್ಬಿಣದ ಅದಿರಿನ ಗಣಿ ಬ್ಲಾಕ್-4” ನ ಯೋಜನಾ ಸ್ಥಳದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆ ನಡೆಸಲಾಗುವುದು.
ಇದಕ್ಕೆ ಸಂಬAಧಿಸಿದAತೆ ಉದ್ದೇಶಿತ ಯೋಜನೆಯ ಕಾರ್ಯ ನಿರ್ವಾಹಕ ಸಾರಾಂಶ ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಸಂಬAಧಿಸಿದ ಕಚೇರಿಗಳಲ್ಲಿ ಸಾರಾಂಶ ಪ್ರತಿಯನ್ನು ಸಾರ್ವಜನಿಕರ ಗಮನಕ್ಕೆ ಇಡಲಾಗಿದೆ.
ಸುತ್ತಮುತ್ತಲಿನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ, ಅಹವಾಲು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ