ಮಂಗಳವಾರ, ಜುಲೈ 22, 2025

ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯಲ್ಲಿ ವಿವಿಧ ಸೇವೆಗಳಲ್ಲಿ ವ್ಯತ್ಯಯ

ಬಳ್ಳಾರಿ,ಜು.22(ಕರ್ನಾಟಕ ವಾರ್ತೆ): ಬೆಂಗಳೂರಿನ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಡೇಟಾ ಸೆಂಟರ್‌ನಲ್ಲಿ ಹಳೆಯ ಸ್ಟೋರೇಜ್ ವ್ಯವಸ್ಥೆ ಬದಲು ಹೊಸದಾಗಿ ಹೆಚ್ಚಿನ ಸಾಮರ್ಥ್ಯ ಸಂಗ್ರಹಣ ವ್ಯವಸ್ಥೆ ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತಿರುವುದರಿಂದ ಜು.25 ರ ಸಂಜೆ 8.30 ರಿಂದ ಜು.27 ರಂದು ರಾತ್ರಿ 10 ಗಂಟೆಯವರೆಗೆ ಬಳ್ಳಾರಿ ನಗರ ವ್ಯಾಪ್ತಿಯ ಐಪಿಡಿಎಸ್ ನ ನಗದು ಸೇವೆ, ಹೊಸ ವಿದ್ಯುತ್ ಸಂಪರ್ಕ ಸೇವೆ ಹಾಗೂ ಉಳಿದ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಸೇವೆಗಳಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ