ಬುಧವಾರ, ಜುಲೈ 23, 2025
ಕಂಪ್ಲಿ ಜೆಸ್ಕಾಂ: ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ
ಬಳ್ಳಾರಿ,ಜು.23(ಕರ್ನಾಟಕ ವಾರ್ತೆ):
ಕಂಪ್ಲಿ ಜೆಸ್ಕಾಂ ಉಪ ವಿಭಾಗದ ಆರ್‌ಏಪಿಡಿಆರ್‌ಪಿ ಸಾಫ್ಟವೇರ್‌ನ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಕಂಪ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಜು.25 ರ 08.30 ರಿಂದ ಜು.27 ರಾತ್ರಿ 10 ಗಂಟೆಯವರೆಗೆ 2 ದಿನಗಳ ಕಾಲ ಕಂಪ್ಲಿ ಜೆಸ್ಕಾಂನ ಆನ್‌ಲೈನ್‌ನಲ್ಲಿ ನೆಟ್‌ವರ್ಕ್ ಲಭ್ಯವಿರದ ಕಾರಣ ಬಿಲ್ ಪಾವತಿ ಹಾಗೂ ಇತರೆ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಕಂಪ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ