ಗುರುವಾರ, ಜುಲೈ 24, 2025
ಬಳ್ಳಾರಿ: ಬುಡಕಟ್ಟು ಗ್ರಾಮಗಳಲ್ಲಿ ಹೋಂಸ್ಟೇ ಆರಂಭಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಜು.24(ಕರ್ನಾಟಕ ವಾರ್ತೆ):
ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಆಬ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಗುರುತಿಸಿರುವ ಬುಡಕಟ್ಟು ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂಸ್ಟೇ ಸ್ಥಾಪಿಸಲು ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೋಂಸ್ಟೇ ಸ್ಥಾಪಿಸಲು ರೂ.5 ಲಕ್ಷ ಹಾಗೂ ಹೋಂಸ್ಟೇ ನವೀಕರಿಸಲು ರೂ.3 ಲಕ್ಷ ಸಹಾಯಧನ ನೀಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಫ್ರಭುಲಿಂಗಪ್ಪ ತಳಕೇರಿ ಅವರು ತಿಳಿಸಿದ್ದಾರೆ.
ಅರ್ಹತೆ:
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಕಾರ್ಯಕ್ರಮದ ಅಡಿ ಆಯ್ಕೆಯಾದ ಗ್ರಾಮದ ಅಥವಾ ಅಕ್ಕಪಕ್ಕದ ಗ್ರಾಮದ ನಿವಾಸಿಯಾಗಿರಬೇಕು.
ಬೇಕಾದ ದಾಖಲೆ:
ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮನೆ, ನಿವೇಶನದ ದಾಖಲೆ, ಮನೆಯ ಫೋಟೋ, ಸ್ಥಳೀಯ ಗ್ರಾಮ ಪಂಚಾಯಿತಿಯಿAದ ಎನ್‌ಓಸಿ ಮತ್ತು ವಾಸಸ್ಥಳ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.
ಈ ಯೋಜನೆಗ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕಮಲಾಪುರ ಲೋಟಸ್ ಮಹಲ್ ಹತ್ತಿರ, ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಜು.29 ರೊಳಗಾಗಿ ಅರ್ಜಿಗಳನ್ನು ಪಡೆದುಕೊಂಡು ನಿಗಧಿತ ಅರ್ಜಿ ನಮೂನೆ ಭರ್ತಿ ಮಾಡಿ ಕಚೇರಿಯಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
*ಅಭಿಯಾನದಡಿ ಆಯ್ಕೆಯಾದ ಗ್ರಾಮಗಳು:*
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ, ಸಿರುಗುಪ್ಪ ತಾಲ್ಲೂಕಿನ ಹಳೇಕೋಟೆ, ಕರ್ಚಿಗನೂರು, ಸಾಲಿಗನೂರು, ಅಕ್ಕತಂಗಿಯರಹಾಳ್, ಮಿಟ್ಟೆ ಸೂಗುರು, ಕುರುಗೋಡು ತಾಲ್ಲೂಕಿನ ಮುಷ್ಟಗಟ್ಟೆ, ಕೆರೆಕೆರೆ. ಸೋಮಲಾಪುರ, ಬಳ್ಳಾರಿ ತಾಲ್ಲೂಕಿನ ಹಿರೇಹಡಗಲಿ, ಬಸರಕೋಡು, ಸಿಂಧುವಾಳ, ರ‍್ರಗುಡಿ, ತಂಬ್ರಳ್ಳಿ, ಬ್ಯಾಲಚಿಂತೆ, ಮೀನಹಳ್ಳಿ, ಪರದೇವನಹಳ್ಳಿ, ಕುಂಟನಹಾಳ್, ಬರ‍್ರನಾಯಕನಹಳ್ಳಿ, ಸಂಡೂರು ತಾಲ್ಲೂಕಿನ ಮಲ್ಲಾಪುರ-72, ಹುಲಿಕುಂಟ-73, ಹಿರೇಕೆರಿಯಾಗಿನಹಳ್ಳಿ, ಅಂಕಮನಹಾಳ್, ತೋಣಸಿಗೇರಿ, ಕನಕಪುರ ಬಿ.ಸಿ., ಯರ‍್ರಯನಹಳ್ಳಿ, ಅಗ್ರಹಾರ, ಓಬಳಾಪುರ, ದೇವರಬುಡೆನಹಳ್ಳಿ, ಸಿದ್ದಾಪುರ, ಮುರಾರಿಪುರ, ನರಸಿಂಗಪುರ, ವಿಠ್ಠಲ್ ನಗರ, ಲಿಂಗದಹಳ್ಳಿ, ಮಲ್ಲಾಪುರ, ತುಮಟಿ, ರಾಜಾಪುರ, ರಾಮಸಾಗರ ಮತ್ತು ಲಕ್ಕಲಹಳ್ಳಿ ಗ್ರಾಮಗಳು.
ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಜಿಲ್ಲೆಯ ಕಮಲಾಪುರದ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.08394-295640 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ