ಬುಧವಾರ, ಜುಲೈ 9, 2025

ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಜು.09(ಕರ್ನಾಟಕ ವಾರ್ತೆ): ನಗರದ ದೇವಿನಗರ ಬಡಾವಣೆಯ ಶಿವಲಿಂಗನಗರದ ಜಂಡಾಕಟ್ಟೆ ಹತ್ತಿರ ವಾರ್ಡ್ ನಂ.33 ರ ನಿವಾಸಿಯಾದ ಭಾಷಾ ಎನ್ನುವ 56 ವರ್ಷದ ವ್ಯಕ್ತಿ ಜು.05 ರಂದು ಕಾಣೆಯಾಗಿದ್ದು, ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ: ಅಂದಾಜು 5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಎಡಕಾಲಿಗೆ ಅಪರೇಶನ್ ಮಾಡಿಸಿದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಸಿಮೆಂಟ್ ಬಣ್ಣದ ಅಂಗಿ, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿಐ ಮೊ.9480803047, ಪಿಎಸ್‌ಐ ಮೊ.94808203085 ಮತ್ತು ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ