ಸೋಮವಾರ, ಡಿಸೆಂಬರ್ 1, 2025
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಡಿ.01(ಕರ್ನಾಟಕ ವಾರ್ತೆ):
ನಗರದ ರೈಲ್ವೇ ನಿಲ್ದಾಣ ಆವರಣದ ಆಟೋ ನಿಲ್ದಾಣದ ಬಳಿ ಅಂದಾಜು 45-50 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೇ ಖಾಯಿಲೆಯಿಂದ ಅಸ್ವಸ್ಥನಾಗಿ ನ.30 ರಂದು ಮೃತಪಟ್ಟಿದ್ದು, ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ ಅಂದಾಜು 5 ಅಡಿ, ಕೋಲು ಮುಖ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಚಿಕ್ಕ ಕಪ್ಪು ಕೂದಲು, ಹಣೆಯ ಮಧ್ಯದಲ್ಲಿ ಹಳೆಗಾಯದ ಗುರುತು, ಕಿವಿಯಲ್ಲಿ ಓಲೆ ಹಾಕಿಸಿಕೊಂಡಿರುತ್ತಾನೆ.
ಎಡಗೈಯಲ್ಲಿ ಆಂಗ್ಲ ಭಾಷೆಯಲ್ಲಿ ಎಸ್ ಆಕಾರದ ಹಚ್ಚೆ ಮತ್ತು ಬಲಗೈ ಮೇಲೆ ತೆಲುಗಿನಲ್ಲಿ ನಾ ಪೇರು ಸೂರ್ಯ ಇಂಟಿಪೇರು ಇಂಡಿಯಾ ಎಂದು 143 ಹಾಗೂ ಖಖ Pಚಿiಣeಡಿ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಸಿಮೆಂಟ್ ಬಣ್ಣದ ಉದ್ದನೇ ತೋಳಿನ ಅಂಗಿ ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿಎಸ್‌ಐ ಮೊ.9480803081 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100, 258102 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ