ಶನಿವಾರ, ಡಿಸೆಂಬರ್ 6, 2025
ಜಿಟಿಟಿಸಿ: ಇಂಟರ್ನ್ ಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಡಿ.06(ಕರ್ನಾಟಕ ವಾರ್ತೆ):
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯ ಬಹುಕೌಶಾಲ್ಯಾಭಿವೃದ್ದಿ ಕೇಂದ್ರದಲ್ಲಿ ಡಿಪ್ಲೋಮಾ ಮತ್ತು ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ತರಬೇತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೋಮಾ ಇನ್ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಎಲೆಕ್ಟಿçಕಲ್ ವಿದ್ಯಾರ್ಥಿಗಳಿಗೆ ಇಂಡಸ್ಟಿçಯಲ್ ಆಟೋಮೇಶನ್, ರಿನ್ಯೂಬಲ್ ಎನರ್ಜಿ, ಎಲೆಕ್ಟಿçಕಲ್ ಯುಟಿಲಿಟಿ ಇಂಜಿನಿಯರಿAಗ್, ಡಿಪ್ಲೋಮಾ ಇನ್ ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ವಿದ್ಯಾರ್ಥಿಗಳಿಗೆ ಆಟೋಮೇಶನ್ ಮತ್ತು ರೊಬೊಟಿಕ್ಸ್, ಇಂಡಸ್ಟಿçÃಯಲ್ ಇಂಟರ್ ನೆಟ್ ಆಫ್ ಥಿಂಗ್ಸ್ ಇಂಟರ್ನ್ ಶಿಪ್ ತರಬೇತಿ ನೀಡಲಾಗುತ್ತದೆ.
ಮೆಕ್ಯಾನಿಕಲ್ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಮೆಕ್ಯಾನಿಕಲ್ ಡಿಸೈನ್ ಕ್ಯಾಡ್/ಕಾಮ್, ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ- ಇಂಡಸ್ಟಿçಯಲ್ ಆಟೋಮೇಶನ್, ಪಿಎಲ್‌ಸಿ/ಸ್ಕಾಡಾ ಪ್ರೋಗ್ರಾಮಿಂಗ್, ಅಡ್ವಾನ್ಸ್ ಎಲೆಕ್ಟೊçà ಹೈಡ್ರಾಲಿಕ್ಸ್ ಮತ್ತು ನ್ಯೂಮ್ಯಾಟಿಕ್ಸ್ ಇಂಟರ್ನ್ ಶಿಪ್ ತರಬೇತಿ ನೀಡಲಾಗುತ್ತದೆ.
ಎಲೆಕ್ಟಿçಕಲ್ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಎಲೆಕ್ಟಿçಷನ್ ವೈರಿಂಗ್ ಇನ್ಸಾ÷್ಟಲೇಷನ್ ಡೊಮೆಸ್ಟಿಕ್/ಇಂಡಸ್ಟಿçÃಯಲ್ ಇಂಟರ್ನ್ ಶಿಪ್ ತರಬೇತಿ ನೀಡಲಾಗುತ್ತದೆ.
ನಗರದ ಜಿಟಿಟಿಸಿ ಬಹು ಕೌಶಾಲ್ಯಾಭಿವೃದ್ದಿ ತರಬೇತಿ ಕೇಂದ್ರದಲ್ಲಿ ಹಲವಾರು ಉನ್ನತÀ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಲಾಗಿದ್ದು, ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಪ್ರಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್ ಮೆಂಟ್ ಪ್ರದೇಶದ ಐಶ್ವರ್ಯ ಕಾಲೋನಿಯ ಐಟಿಐ ಕ್ಯಾಂಪಸ್ ನ ಜಿಟಿಟಿಸಿ ಕಾಲೇಜು ಅಥವಾ ಮೊ.9620057086, 9900414812, 6361880236 ಗೆ ಸಂಪರ್ಕಿಸಬಹುದು ಎಂದು ಜಿಟಿಟಿಸಿ ಪ್ರಾಚಾರ್ಯ ಮುತ್ತಣ್ಣ ದರ್ಮಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ