ಸೋಮವಾರ, ಡಿಸೆಂಬರ್ 8, 2025

ಬಳ್ಳಾರಿ ಮಹಾನಗರ ಪಾಲಿಕೆ: ಬೀದಿನಾಯಿ ದತ್ತು ಪಡೆದು ಪೋಷಿಸಲು, ಆಹಾರ ಪೂರೈಸುವವರಿದ್ದಲ್ಲಿ ಸಂಪರ್ಕಿಸಿ

ಬಳ್ಳಾರಿ,ಡಿ.08(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳನ್ನು ದತ್ತು ಪಡೆದು ಅವುಗಳನ್ನು ಪೋಷಣೆ ಮಾಡಲು ಇಚ್ಚಿಸುವವರು, ಪ್ರಾಣಿಗಳ ಸಂರಕ್ಷಣೆ ಸಂಕಲ್ಪ ಹೊಂದಿರುವವರು, ಪ್ರಾಣಿಗಳ ಮೇಲೆ ದಯೆ ಇರುವವರು ಬೀದಿನಾಯಿಗಳನ್ನು ದತ್ತು ಪಡೆಯಲು ಅಥವಾ ಆಶ್ರಣ ತಾಣದಲ್ಲಿರುವ ಬೀದಿನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು ಇದ್ದಲ್ಲಿ ಕೂಡಲೇ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದಾಗಿದೆ. ಬೀದಿನಾಯಿಗಳಿAದ ಸಾರ್ವಜನಿಕರಿಗೆ ಹಾಗೂ ಸಂಚಾರಿಸುವ ವಾಹನದಾರರಿಗೆ ಆಗುವ ತೊಂದರೆಯನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ವತಿಯಿಂದ ಹಿಡಿದು ಅವುಗಳನ್ನು ಆಶ್ರಯ ತಾಣಕ್ಕೆ ಸಾಗಿಸಲಾಗುತ್ತಿದೆ. ಹಾಗಾಗಿ ಎನ್.ಜಿ.ಓ ಸಂಘ ಸಂಸ್ಥೆಗಳು, ಪ್ರಾಣಿದಯಾ ಸಂಘಗಳು ಹಾಗೂ ಇತರೆ ಪ್ರಾಣಿ ಪ್ರಿಯರಿದ್ದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ