ಗುರುವಾರ, ಜನವರಿ 8, 2026

ಜ.10 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜ.08(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 220/110/11ಕೆ.ವಿ ಯ ಅಲ್ಲೀಪುರ ಸ್ವೀಕರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಂಡಿರುವುದರಿAದ ಜ.10 ರಂದು ಬೆಳೀಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಅಲ್ಲೀಪುರ ಸ್ವೀಕರಣಾ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-31 ಅಲ್ಲೀಪುರ ನಗರ ಪ್ರದೇಶ ಫೀಡರ್ ಮಾರ್ಗದ ಅಲ್ಲಿಪುರ, ರಾಮೇಶ್ವರಿ ನಗರ, ಬೈಪಾಸ್ ರಸ್ತೆ. ಎಫ್-32 ಐ.ಪಿ ಸೆಟ್ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಅಲ್ಲೀಪುರ ಕೃಷಿ ಪ್ರದೇಶಗಳು. ಎಫ್-37 ಮತ್ತು ಎಫ್-38 ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಕೈಗಾರಿಕೆ ಪ್ರದೇಶ. ಎಫ್-71 ಹರಗಿನದೋಣಿ ಎನ್.ಜೆ.ವೈ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡ ಮುಂತಾದ ಗ್ರಾಮಗಳು. ಎಫ್-74 ಗೌತಮ್ ನಗರ ಎನ್.ಜೆ.ವೈ ಫೀಡರ್ ಮಾರ್ಗದ ಡಿಸಿ ನಗರ, ಪ್ರ‍್ರಶಾಂತ ನಗರ, ಆಲದಹಳ್ಳಿ, ಗೌತಮ್ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೋಹನಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ