ಶನಿವಾರ, ಜನವರಿ 17, 2026

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜ.17(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ನಿಲ್ದಾಣದ ಜನರಲ್ ಟಿಕೆಟ್ ಕೌಂಟರ್ ಹತ್ತಿರ ಸುಮಾರು 60 ವರ್ಷದ ಅನಾಮಧೇಯ ವ್ಯಕ್ತಿಯು ಮಲಗಿಕೊಂಡಾಗ ಯಾವುದೋ ಕಾಯಿಲೆಯಿಂದ ಬಳಲಿ ಸರಿಯಾದ ಸಮಯಕ್ಕೆ ಔಷದೋಪಚಾರ ಸಿಗದೇ ಸ್ವಾಭಾವಿಕವಾಗಿ ಜ.12 ರಂದು ಮೃತಪಟ್ಟಿದ್ದು, ಮೃತನ ಮಾಹಿತಿ ಇರುವುದಿಲ್ಲ, ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಮೃತನ ಚಹರೆ ಪಟ್ಟಿ: ಸುಮಾರು ಎತ್ತರ 5.6 ಅಡಿ, ಕೋಲು ಮುಖ, ತೆಳುವಾದ(ಬಡಕಲು) ದೇಹ, ಗೋಧಿ ಮೈ ಬಣ್ಣ, ದಪ್ಪನೆಯ ಮೂಗು, ಅಗಲವಾದ ಹಣೆ, ತಲೆಯಲ್ಲಿ ಸುಮಾರು 02 ಇಂಚು ಕಪ್ಪು ಕೂದಲು ಮತ್ತು ಕಪ್ಪು ಮಿಶ್ರಿತ ಬಿಳಿಯ ಗಡ್ಡ, ಮೀಸೆ ಬಿಟ್ಟಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆ: ಕಪ್ಪು ಗೆರೆಯುಳ್ಳ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಬಿಳಿ ಬಣ್ಣದ ಕಾಟನ್ ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಬೆಡ್ ಶೀಟ್, ಕೆಂಪು ಬಣ್ಣದ ಚಪ್ಪಲಿ ಇರುತ್ತವೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ದೂ.08392-276063, ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ.080-22871291ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ