ಸೋಮವಾರ, ಜನವರಿ 19, 2026

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಜ.19(ಕರ್ನಾಟಕ ವಾರ್ತೆ): ನಗರದ ಜಾಗೃತಿ ನಗರ ಬಡಾವಣೆಯ ಕೌಲ್ ಬಜಾರ್ ನಿವಾಸಿಯಾದ ಮೊಹಮ್ಮದ್ ಇರ್ಫಾನ್ ಎನ್ನುವ 27 ವರ್ಷದ ವ್ಯಕ್ತಿ 2024ರ ಜುಲೈ 02 ರಂದು ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5.6 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈ ಬಣ್ಣ, ಹೊಂದಿದ್ದು, ವ್ಯಕ್ತಿ ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿ.ಐ ಮೊ.9480803047, ಪಿಎಸ್‌ಐ ಮೊ.94808203084, 9480803085 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ. 08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ