ಭಾನುವಾರ, ಜನವರಿ 25, 2026
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಬಳ್ಳಾರಿ ಪ್ರವಾಸ
ಬಳ್ಳಾರಿ,ಜ.25(ಕರ್ನಾಟಕ ವಾರ್ತೆ):
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಜ.26ರಂದು ಬಳ್ಳಾರಿ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
ಜ.26 ರಂದು ಬೆಳಿಗ್ಗೆ 8.20 ಕ್ಕೆ ನಗರದ ರಾಜಕುಮಾರ್ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವ ಸಮರ್ಪಣೆ ಮಾಡುವರು. ಬೆಳಿಗ್ಗೆ 8.30 ಗಂಟೆಗೆ ಎಚ್.ಆರ್. ಗವಿಯಪ್ಪ ವೃತ್ತದಲ್ಲಿ (ಮೋತಿ ಸರ್ಕಲ್) 150 ಅಡಿ ಎತ್ತರದ ರಾಷ್ಟçಧ್ವಜಾರೋಹಣ ನೆರವೇರಿಸುವರು.
ಬಳಿಕ ಬೆಳಿಗ್ಗೆ 8.50 ಗಂಟೆಗೆ ಬಿಎಂಸಿಆರ್ಸಿ ಕಾಲೇಜು ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು. ನಂತರ ಬೆಳಿಗ್ಗೆ 09 ಗಂಟೆಗೆ ಬಿಎಂಸಿಆರ್ಸಿ ಕಾಲೇಜು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಬಳಿಕ ಪಥಸಂಚಲನ ವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸುವರು. ತರುವಾಯ ಗಣರಾಜ್ಯೋತ್ಸವ ಸಂದೇಶ ನೀಡುವರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ