ಶುಕ್ರವಾರ, ಜನವರಿ 23, 2026

ಕುರುಗೋಡು: ಬಾಡಿಗೆ ಕಟ್ಟಡ ಬೇಕಾಗಿದೆ

ಬಳ್ಳಾರಿ,ಜ.23(ಕರ್ನಾಟಕ ವಾರ್ತೆ): ಕುರುಗೋಡು ತಾಲ್ಲೂಕು ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯವು ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ವಿದ್ಯಾರ್ಥಿನಿಲಯದ ನಿರ್ವಹಣೆಗಾಗಿ ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ಅನುಸಾರವಾಗಿ ಕಟ್ಟಡವನ್ನು ಬಾಡಿಗೆಗೆ ನೀಡಲು ಇಚ್ಚಿಸುವ ಕಟ್ಟಡಗಳ ಮಾಲೀಕರು ಇದ್ದಲ್ಲಿ ಸಂಪರ್ಕಿಸಬಹುದು. ನಗರದ ಕಂಟೋನ್‌ಮೆAಟ್ ಪ್ರದೇಶದ ಓ.ಪಿ.ಸರ್ಕಲ್ ಎಲ್‌ಎಲ್‌ಸಿ ಕಾಲೋನಿ ಹತ್ತಿರದ ಡಿಸ್ನಿ ಫಂಕ್ಷನ್ ಹಾಲ್ ಎದುರುಗಡೆಯ 1ನೇ ಮಹಡಿಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ದೂ.08392-294492 ಗೆ ಸಂಪರ್ಕಿಸಬಹುದು ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ