ಬುಧವಾರ, ಜನವರಿ 21, 2026
ಕೃಷಿ ಇಲಾಖೆ: ಪಿಎಂಎಫ್‌ಎAಇ ಯೋಜನೆ ಸೌಲಭ್ಯ ಪಡೆದುಕೊಳ್ಳಿ
ಬಳ್ಳಾರಿ,ಜ.20(ಕರ್ನಾಟಕ ವಾರ್ತೆ):
ಸಣ್ಣ ಮತ್ತು ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಅವಕಾಶ ಬದಗಿಸುತ್ತಿದ್ದು, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಅಥವಾ ಪಿಎಂಎಫ್‌ಎAಇ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 6,000 ಹೊಸ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 15 ಲಕ್ಷದವರÉಗÉ ಸಹಾಯಧನ ಲಭ್ಯವಿದೆ.
*ಏನಿದು ಪಿಎಂಎಫ್‌ಎAಇ ಯೋಜನೆ?:*
ಪ್ರಧಾನ ಮಂತ್ರಿಗಳ ಕಿರು ಅಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಎಂಬುದು ಕೇಂದ್ರೀಯ ಅನುದಾನಿತ ವಲಯದ ಯೋಜನೆಯಾಗಿದೆ. ಇದು ದೇಶದ ಕಿರು ಅಹಾರ ಸಂಸ್ಕರಣಾ ಘಟಕಗಳಿಗÉ ಹಣಕಾಸು, ತಾಂತ್ರಿಕ ಮತ್ತು ವ್ಯವಹಾರ ಬÉಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಆಹಾರ ಸಂಸ್ಕರಣಾ ಉದ್ಯಮದ ಅಸಂಘಟಿತ ವಿಭಾಗದಲ್ಲಿ ಹೊಸ ಮತ್ತು ಅಸ್ತಿತ್ವದಲ್ಲಿರುವ ವೈಯಕ್ತಿಕ ಕಿರು ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ವಲಯದ ಕಾನೂನುಬದ್ಧಗೊಳಿಸುವಿಕೆಯನ್ನು ಉತ್ತೇಜಿಸುವುದು ಪಿಎಂಎಫ್‌ಎAಇ ಯೋಜನೆಯ ಗುರಿಯಾಗಿದೆ.
*ಉದ್ದೇಶಗಳು:*
ಹಾಲಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು, ಎಫ್ ಪಿಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸಾಲ ಸೌಲಭ್ಯಗಳನ್ನು ಹೆಚ್ಚಿಸುವುದು. ಬ್ರಾಂಡಿAಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವ ಮೂಲಕ ಸಂಘಟಿತ ಸರಬರಾಜು ಸರಪಳಿಯೊಂದಿಗÉ ಏಕÃಕರಣಗೊಳಿಸುವುದು. ಈಗಿರುವ 2,00,000 ಉದ್ದಿಮೆಗಳನ್ನು ಔಪಚಾರಿಕ ಚೌಕಟ್ಟಿನೊಳಗÉ ಸೇರಿಸಲು ಬÉಂಬಲ ಒದಗಿಸುವುದು.
ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನು ಶೇಖರಣÉ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‌ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರÉಯುವಿಕೆಯನ್ನು ಹೆಚ್ಚಿಸುವುದು. ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಯನ್ನು ಬಲಪಡಿಸುವುದು, ಹಾಗೂ ಉದ್ದಿಮೆಗಳಿಗÉ ವೃತ್ತಿಪರ ಹಾಗೂ ತಾಂತ್ರಿಕ ಬÉಂಬಲ ದೊರÉಯುವಿಕೆಯನ್ನು ಹೆಚ್ಚಿಸುವುದಾಗಿದೆ.
*ಲಭಿಸುವ ಸಬ್ಸಿಡಿ ಎಷ್ಟು?:*
ಈ ಯೋಜನೆಯಡಿ ರಾಜ್ಯ ಸರ್ಕಾರವು 6 ಲಕ್ಷ ರೂ. ಮತ್ತು ಕೇಂದ್ರ ಸರ್ಕಾರವು 9 ಲಕ್ಷ ರೂ.ಗಳ ಸಹಾಯಧನ ನೀಡುತ್ತದೆ. ಗರಿಷ್ಠ 15 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತಿದೆ.
*ಅರ್ಹತೆ:*
18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಗÉ ಅರ್ಜಿ ಸಲ್ಲಿಸಬಹುದು. ಇದಕ್ಕÉ ಯಾವುದೇ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ.
*ರೈತ ಉತ್ಪಾದಕ ಸಂಸ್ಥೆ (ಈPಔ):*
ಸ್ವ-ಸಹಾಯ ಗುಂಪುಗಳು, ಸಹಕಾರಿ ಸಂಘಗಳು, ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶವಿದೆ.
*ಈ ಯೋಜನೆಯಡಿ ಪ್ರಾರಂಭಿಸಬಹುದಾದ ಘಟಕಗಳು:*
ಸಿರಿಧಾನ್ಯ ಮತ್ತು ಧಾನ್ಯಗಳ ಸಂಸ್ಕರಣೆ, ಬೆಲ್ಲದ ಉತ್ಪನ್ನಗಳು, ಉಪ್ಪಿನಕಾಯಿ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರÉಸ್ ಆಯಿಲ್, ಮೆಣಸಿನಕಾಯಿ ಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಮಸಾಲೆ ಉತ್ಪನ್ನಗಳು ಮತ್ತು ವಿವಿಧ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.
ಕೇವಲ ಶೇ.10 ಹೂಡಿಕೆ ಮಾಡಿ, ಶೇ.90 ರಷ್ಟು ಬ್ಯಾಂಕಿನ ಸಾಲ ಸೌಲಭ್ಯ ಪಡೆದು ಒಂದು ಉದ್ದಿಮೆ ಪ್ರಾರಂಭಿಸಲು ಸುವರ್ಣ ಅವಕಾಶವಾಗಿದೆ.
ಆಸಕ್ತ ರೈತರು, ರೈತ ಮಹಿಳೆಯರು, ಯುವಕ, ಯುವತಿಯರು ತಮ್ಮ ಅರ್ಜಿಗಳನ್ನು ಸಂಬAಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ ಅಥವಾ ರೈತ ಕರೆ ಕೇಂದ್ರದ ಸಂಖ್ಯೆ: 1800-425-3553 ಗೆ ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ