ಮಂಗಳವಾರ, ಜನವರಿ 20, 2026
ಅರ್ಜಿ ಆಹ್ವಾನ
ಬಳ್ಳಾರಿ,ಜ.20(ಕರ್ನಾಟಕ ವಾರ್ತೆ):
ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾ ಕಚೇರಿಯಲ್ಲಿ 2025-26 ನೇ ಸಾಲಿನ ಖಾಲಿ ಇರುವ ಯೋಜನಾಧಿಕಾರಿ (01 ಹುದ್ದೆ) ಹುದ್ದೆಯ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
*ಅರ್ಹತೆ:*
ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂ.ಎ., ಎಂ.ಎಸ್.ಡಬ್ಲೂö್ಯ., ಎಂ.ಎ ಇನ್ ಸೋಶಿಯಾಲಜಿ., ಎಂ.ಎಸ್ಸಿ ಇನ್ ಸೈಕಾಲಾಜಿ ಪದವಿ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. 65 ವರ್ಷದೊಳಗಿರುವ ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ಅರ್ಜಿಗಳನ್ನು ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ತಮ್ಮ ವಿದ್ಯಾರ್ಹತೆಯ ದಾಖಲಾತಿ ಹಾಗೂ ಅನುಭವದ ಮೂಲ ಪ್ರಮಾಣ ಪತ್ರಗಳೊಂದಿಗೆ ಜ.31 ರೊಳಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸ್ತಿçà ಸೇವಾನಿಕೇತನ ಆವರಣ, ಮಹಿಳಾ ಪೋಲಿಸ್ ಠಾಣೆ ಪಕ್ಕ, ಎಸ್.ಪಿ.ಸರ್ಕಲ್ ಹತ್ತಿರ, ಬಳ್ಳಾರಿ ಇಲ್ಲಿ ಸಲ್ಲಿಸಬಹುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ