ಗುರುವಾರ, ಜನವರಿ 8, 2026

ಮೃತ ದೇಹ ಪತ್ತೆಗಾಗಿ ಮನವಿ

ಬಳ್ಳಾರಿ,ಜ.08(ಕರ್ನಾಟಕ ವಾರ್ತೆ): ನಗರದ ಇಂಡಸ್ಟಿçÃಯಲ್ ಏರಿಯಾದ ಮುಂಡರಗಿ ಹೆಚ್‌ಎಲ್‌ಸಿ ಕಾಲುವೆ ಮೇಲಿನ ರಸ್ತೆಯಲ್ಲಿ ವಾಹನ ಚಾಲಕರಾದ ಕುಮಾರ್ ಮತ್ತು ಮಲ್ಲಿಕಾರ್ಜುನ ಎಂಬುವವರು ಟವರ್ ಗೆ ಅಳವಡಿಸುವ ಸಲಕರಣೆ ತುಂಬಿಕೊAಡು ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ನಿರ್ಲ್ಯಕ್ಷತನದಿಂದ ವಾಹನ ಕಾಲುವೆಗೆ ಜ.04 ರಂದು ಉರುಳಿದ್ದು, ಇಬ್ಬರು ಮೃತಪಟ್ಟಿರುತ್ತಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಾರ್ ಎಂಬುವ ಚಾಲಕನ ಮೃತದೇಹವು ಆಂಧ್ರಪ್ರದೇಶದ ಕಣೇಕಲ್ ಹತ್ತಿರದ ಮೈಲಾಪುರ ಗ್ರಾಮದ ಹತ್ತಿರದ ಕಾಲುವೆಯಲ್ಲಿ ದೊರೆತಿದೆ. ಇನ್ನೋರ್ವ ಸಹ ಚಾಲಕ ಮಲ್ಲಿಕಾರ್ಜುನ ಮೃತ ದೇಹ ಪತ್ತೆಯಾಗಿರುವುದಿಲ್ಲ, ಪತ್ತೆಗೆ ಸಹಕರಿಸಬೇಕು ಎಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. *ಮಲ್ಲಿಕಾರ್ಜುನ ಚಹರೆ ಗುರುತು:* ಎತ್ತರ 5.9 ಅಡಿ, ತೆಳ್ಳನೇಯ ಮೈಕಟ್ಟು, ಉದ್ದನೇಯ ಮುಖ ಹಾಗೂ ಮೂಗು, ಗೋಧಿ ಮೈ ಬಣ್ಣ ಹೊಂದಿರುತ್ತಾನೆ. ಕ್ರೀಮ್ ಬಣ್ಣದ ತುಂಬು ತೋಳಿನ ಡಿಜೈನ್ ಅಂಗಿ, ಹಸಿರು ಬಣ್ಣದ ಕಟ್ ಬನಿಯನ್, ಆಕಾಶ ನೀಲಿ ಬಣ್ಣದ ನಿಕ್ಕರ್, ಖಾಕಿ ಪ್ಯಾಂಟ್ ಮತ್ತು ಸೊಂಟದಲ್ಲಿ ಲಟದರ್ ಬೆಲ್ಟ್ ಧರಿಸಿರುತ್ತಾನೆ. ತಲೆಯಲ್ಲಿ ಕಪ್ಪು ಕೂದಲು, ಕೊರಳಲ್ಲಿ ಗಣೇಶನ ಡಾಲರ್ ಇರುವ ಕಟ್ಟು ಬಣ್ಣದ ದಾರ ಮತ್ತು ಬಲ ಕೈನಲ್ಲಿ ಹಳದಿ, ಪಿಂಕ್ ಮಿಶ್ರೀತ ದಾರ ಕಟ್ಟಿಕೊಂಡಿರುತ್ತಾನೆ. ವ್ಯಕ್ತಿಯ ಮೃತ ದೇಹದ ಮಾಹಿತಿ ಸಿಕ್ಕಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಐ ದೂ.08392-275722, ಮೊ.9480803048, ಬಳ್ಳಾರಿ ನಗರ ಡಿವೈಎಸ್‌ಪಿ ದೂ.08392-272322 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ