ಮಂಗಳವಾರ, ಜನವರಿ 6, 2026
ಕರ್ನಾಟಕ ಜಾನಪದ ಅಕಾಡೆಮಿ: ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಜ.06(ಕರ್ನಾಟಕ ವಾರ್ತೆ):
ಕರ್ನಾಟಕ ಜಾನಪದ ಅಕಾಡೆಮಿಯು ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಶೋಧನಾರ್ಥಿಗಳಿಗಾಗಿ ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಜಾನಪದ ಅಕಾಡೆಮಿಯು ಫೆಲೋಶಿಪ್ (ಅಧ್ಯಯನ ವೇತನ) ಲೇಖನಗಳಿಗೆ ಅರ್ಜಿಗಳನ್ನು ಕರೆಯಲಾಗಿದ್ದು, ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಶೀರ್ಷಿಕೆಗಳನ್ನು ಆಧರಿಸಿ ಕ್ಷೇತ್ರ ಕಾರ್ಯ ನಡೆಸಿ ಅಧ್ಯಯನ ಕೃತಿಗಳನ್ನು ಸಿದ್ಧಪಡಿಸಿಕೊಡಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿಪಡಿಸಿರುವ ಒಂದು ಶೀರ್ಷಿಕೆಯನ್ನು ಆಯ್ಕೆ ಮಾಡಿ 5 ಪುಟಗಳ ಸಾರಲೇಖ (Synopsis)ವನ್ನು ಬರೆದು ಜ.23 ರೊಳಗಾಗಿ ರಿಜಿಸ್ಟಾçರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002 ಇವರಿಗೆ ಕಳುಹಿಸಿಕೊಡಬಹುದು.
ಸಾರಲೇಖ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಲೋಶಿಪ್ ಕಾರ್ಯ ನಡೆಸಲು ಆದೇಶ ನೀಡಲಾಗುವುದು.
ಫೆಲೋಶಿಪ್‌ಗಾಗಿ ಸಾಮಾನ್ಯ– 1, ಪರಿಶಿಷ್ಟ ಜಾತಿ – 5 ಮತ್ತು ಪರಿಶಿಷ್ಟ ಪಂಗಡ–9 ಮಂದಿ ಸೇರಿದಂತೆ 15 ಮಂದಿಗಾಗಿ ಅಭ್ಯರ್ಥಿಗಳಿಂದ ಫೆಲೋಶಿಪ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇತರೆ ವಿವರಗಳಿಗಾಗಿ ಅಕಾಡೆಮಿಯ ವೆಬ್‌ಸೈಟ್ (https://janapada.karnataka.gov.in) ನಿಂದ ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾçರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ