ಶುಕ್ರವಾರ, ಜನವರಿ 9, 2026
ಕೋರ್ಟ್ ಮೊಹಲ್ಲಾ ಮಸೀದಿ ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ನೋಂದಣಿ
ಬಳ್ಳಾರಿ,ಜ.09(ಕರ್ನಾಟಕ ವಾರ್ತೆ):
ನಗರದ ಮಿಲ್ಲರ್‌ಪೇಟೆ ವ್ಯಾಪ್ತಿಯಲ್ಲಿರುವ ಕೋರ್ಟ್ ಮೊಹಲ್ಲಾ ಮಸೀದಿ ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ನೋಂದಣಿ ಕಾರ್ಯ ಇದೇ ಜನವರಿ 12 ರಿಂದ ಫೆಬ್ರವರಿ 09 ರವರೆಗೆ ನಡೆಯಲಿದೆ ಎಂದು ನೋಂದಣಿ ಅಧಿಕಾರಿ ಆಗಿರುವ ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.
ಜನವರಿ 12 ರಿಂದ ಜನವರಿ 31 ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ಹಾಗೂ ಮಧ್ಯಾಹ್ನ 02.30 ರಿಂದ ಸಂಜೆ 04.30ರ ಅವಧಿಯಲ್ಲಿ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆಗಳನ್ನು ವಿತರಣೆ ಮಾಡಲಾಗುತ್ತದೆ.
ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ 3 ಇತ್ತೀಚಿನ ಭಾವಚಿತ್ರಗಳು ಹಾಗೂ ರೂ. 600 ಶುಲ್ಕ ಹಾಗೂ ಅಧಿಕೃತ ವಿಳಾಸದ 02 ಗುರುತಿನ ಚೀಟಿಗಳೊಂದಿಗೆ ಜನವರಿ 31 ರ ಮಧ್ಯಾಹ್ನ 04.30 ಗಂಟೆ ರೊಳಗೆ ಜಿಲ್ಲಾ ವಕ್ಫ್ ಕಛೇರಿಯಲ್ಲಿ ಸ್ಥಾಪಿಸಲಾಗಿರುವ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.
ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಫೆಬ್ರವರಿ 05 ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬAಧಿಸಿದAತೆ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಫೆಬ್ರವರಿ 06 ರ ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದು.
ಆಕ್ಷೇಪಣೆಗಳ ವಿಚಾರಣೆ ಫೆಬ್ರವರಿ 07 ರಂದು ಬೆಳಿಗ್ಗೆ 11 ಗಂಟೆಯಿAದ ನಡೆಸಲಾಗುತ್ತದೆ. ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಫೆಬ್ರವರಿ 09 ರಂದು ಬಳ್ಳಾರಿ ನಗರದ ಮಿಲ್ಲರ್‌ಪೇಟೆ ವ್ಯಾಪ್ತಿಯಲ್ಲಿರುವ ಕೋರ್ಟ್ ಮೊಹಲ್ಲಾ ಮಸೀದಿ ಮತ್ತು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು.
ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನೋಂದಣಿ ಅಧಿಕಾರಿಗಳ ಕಚೇರಿಯು ಸರಕಾರಿ ರಜಾದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ