ಗುರುವಾರ, ಡಿಸೆಂಬರ್ 14, 2023

ವಿಠಲಾಪುರ: ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಶಿಶಿಕ್ಷು ಮೇಳ ಡಿ.18 ರಂದು

ಬಳ್ಳಾರಿ,ಡಿ.14(ಕರ್ನಾಟಕ ವಾರ್ತೆ): ವಿಠಲಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಸೆಂಬರ್ 18ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಶಿಶಿಕ್ಷು ಮೇಳ ಏರ್ಪಡಿಸಲಾಗಿದೆ. ಈ ಮೇಳದಲ್ಲಿ ವಿವಿಧ ಉದ್ಯಮದವರು ಪಾಲ್ಗೊಳ್ಳುತ್ತಿದ್ದು, ಐ.ಟಿ.ಐ ಪಾಸಾದ ಮತ್ತು ಅಂತಿಮ ವರ್ಷದ ಅಭ್ಯಶಿಸುತ್ತಿರುವ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ (ಬಯೋಡೇಟಾ), ಇತ್ತಿಚಿನ ಭಾವಚಿತ್ರ, ಮೂಲದಾಖಲೆಗಳೊಂದಿಗೆ ಶಿಶಿಕ್ಷು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9632069007, ಮೊ.9901737911, ಮೊ.7676161097 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ