ಮಂಗಳವಾರ, ಡಿಸೆಂಬರ್ 26, 2023

ಜಿಲ್ಲಾ ಮಟ್ಟದ ಕ್ರೀಡಾ ಶಾಲೆ, ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆ ಡಿ.29ರಂದು

ಬಳ್ಳಾರಿ,ಡಿ.26(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾ ಶಾಲೆ ಹಾಗೂ ವಸತಿ ನಿಲಯಕ್ಕೆ 2024-25ನೇ ಸಾಲಿನ ಪ್ರತಿಭಾವಂತ ಬಾಲಕ ಮತ್ತು ಬಾಲಕಿ ಕ್ರೀಡಾಪಟುಗಳ ಪ್ರಥಮ ಹಂತದ ಆಯ್ಕೆ ಪ್ರಕ್ರಿಯೆಯು ಡಿ.29ರಂದು ಬೆಳಿಗ್ಗೆ 11 ಗಂಟೆಗೆ ನಗರದ ನಲ್ಲಚೇರುವು ಪ್ರದೇಶದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ದೈಹಿಕ ಪರೀಕ್ಷೆಯನ್ನು ನಡೆಸಲಾಗುವುದು. ಭಾಗವಹಿಸುವ ಕ್ರೀಡಾ ಪಟುಗಳು 4ನೇ ತರಗತಿ ಪಾಸ್ ಆಗಿ 5ನೇ ತರಗತಿಗೆ ಪ್ರವೇಶ ಪಡೆಯುವವರಾಗಿರಬೇಕು (ಹಾಕಿ ಮತ್ತು ಅಥ್ಲೆಟಿಕ್ಸ್ ಬಾಲಕರಿಗೆ ಮಾತ್ರ). 11 ವರ್ಷದೊಳಗೆ (ಜನ್ಮ ದಿನಾಂಕ 01.06.2013 ನಂತರ ಜನಿಸಿರಬೇಕು). 7ನೇ ತರಗತಿ ಪಾಸ್ ಆಗಿ 8ನೇ ತರಗತಿಗೆ ಪ್ರವೇಶ ಪಡೆದಿರಬೇಕು (14 ವರ್ಷದೊಳಗಿನವರು ಜನ್ಮ ದಿನಾಂಕ 01.06.2010 ನಂತರ ಜನಿಸಿರಬೇಕು). ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್‍ಬಾಲ್, ಜೂಡೊ, ಕುಸ್ತಿ, ಈಜು, ಜಿಮ್‍ನಸ್ಟಿಕ್, ಹಾಕಿ ಹಾಗೂ ಪುಟ್ಬಾಲ್ ಪುರುಷರಿಗೆ ಮಾತ್ರ) ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ವಯಸ್ಸಿನ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ದೊಂದಿಗೆ ಹಾಜರಾಗುವುದು. ಯಾವುದೇ ಪ್ರಯಾಣ ಬತ್ಯೆ ಮತ್ತು ದಿನಬತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಮೊ.972552385 ಅಥವಾ ಹಾಕಿ ತರಬೇತುದಾರರಾದ ಎಂ.ಜಾಕೀರ್ ಅವರ ಮೊ.9036335986, ಅಥ್ಲೆಟಿಕ್ ತರಬೇತುದಾರಾದ ರೋಹಿಣಿ ಪರ್ವತೀಕರ್ ಮೊ.9448830108, ಬ್ಯಾಡ್ಮಿಂಟನ್ ತರಬೇತುದಾರರಾದ ಜಿ.ರವಿ ಮೊ.9739852460 ಹಾಗೂ ಪುಟ್ಬಾಲ್ ತರಬೇತುದಾರರಾದ ಮಸುದ್ ಮೊ.9886688858 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ