ಮಂಗಳವಾರ, ಡಿಸೆಂಬರ್ 26, 2023
ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟಿçÃಯ ರೈತ ದಿನಾಚರಣೆ
ಬಳ್ಳಾರಿ,ಡಿ.26(ಕರ್ನಾಟಕ ವಾರ್ತೆ):
ರೈತರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಸಮಗ್ರ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಧೃಡರಾಗಬೇಕು ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಅವರು ರೈತರಿಗೆ ಕರೆ ನೀಡಿದರು.
ತಾಲ್ಲೂಕಿನ ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ವಿಜ್ಞಾನ ಕೇಂದ್ರ ಅವರ ಸಹಯೋಗದೊಂದಿಗೆ ರಾಷ್ಟಿçÃಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆತ್ಮ ಯೋಜನೆಯಡಿ 2023-24 ನೇ ಸಾಲಿನ ಮೂವರು ಕೃಷಿಕರಿಗೆ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
*ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ:* ಗಾಳೆಪ್ಪ (ವೈ ಬೂದಿಹಾಳ್), ಹೆಚ್.ಮಲ್ಲಿಕಾರ್ಜುನ (ಹರಗಿನಡೋಣಿ), ದೊಡ್ಡ ಬಸವರಾಜ್ (ಹರಗಿನಡೋಣಿ).
ಅದೇ ರೀತಿಯಾಗಿ ಐದು ಜನ ಕೃಷಿಕರಿಗೆ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
*ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ:* ಲಕ್ಷಿö್ಮÃ (ಸಿಂಧಿಗೇರಿ), ಎಲ್.ವಿ.ಲಿಂಗಾರೆಡ್ಡಿ (ಮೋಕ), ಬಿ.ಮಲ್ಲಿಕಾರ್ಜುನ (ತೆಗ್ಗಿನ ಬೂದಿಹಾಳ್), ಕಟ್ಟೇಗೌಡ (ಶಂಕರಬAಡೆ), ಜಿ.ಕುಮಾರಸ್ವಾಮಿ (ಮಿಂಚೇರಿ).
ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕ ಎನ್.ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ದಯಾನಂದ.ಎA., ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಗೋವಿಂದಪ್ಪ.ಎA.ಆರ್., ವಿಜ್ಞಾನಿ ಮಣ್ಣು ವಿಜ್ಞಾನ ಡಾ.ರವಿ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಐನಾಥ ರೆಡ್ಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಲಕ್ಷಿö್ಮÃಕಾಂತ ರೆಡ್ಡಿ ಸೇರಿದಂತೆ ರೈತರು ಹಾಗೂ ಸಿಬ್ಬಂದಿ ವರ್ಗದವರು, ಮತ್ತಿತರರು ಉಪಸ್ಥಿತರಿದ್ದರು.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ