ಗುರುವಾರ, ಡಿಸೆಂಬರ್ 21, 2023
ನಗರದ ಕೆಲವು ಮಾರ್ಗಗಳಲ್ಲಿ ಭಾರಿ ವಾಹನಗಳ ಸಂಚಾರ ನಿಷೇದÀ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಡಿ.21(ಕರ್ನಾಟಕ ವಾರ್ತೆ):
ನಗರದಲ್ಲಿ ಇತ್ತೀಚಿಗೆ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಕೆಲವು ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರನ್ನು ನಿಷೇದಿಸಿ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ನಗರದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನಗರದ ಒಳಗಡೆ ಭಾರಿ ವಾಹನಗಳು ಹಾಗೂ ಭಾರಿ ಸರಕು ಸಾಗಣಿಕೆ ವಾಹನಗಳು ಸಾಗುತ್ತಿದ್ದು, ಇದರಿಂದ ಹಲವಾರು ಮರಣಗಳು ಸಂಭವಿಸಿದ್ದು ಹಾಗೂ ನೂರಾರು ಅಪಘಾತಗಳು ಈಗಾಗಲೇ ನಡೆದಿದ್ದು, ರಸ್ತೆ ಅಪಘಾತಗಳನ್ನು ತಡೆದು ಸುಗಮ ಸಂಚಾರವನ್ನು ಕಲ್ಪಿಸುವ ಹಿತದೃಷ್ಟಿಯಿಂದ ಭಾರಿ ವಾಹನಗಳ ಸಂಚಾರನ್ನು ಕೆಲವು ಮಾರ್ಗಗಳಲ್ಲಿ ಸಂಚರಿಸದಂತೆ ಆದೇಶಿಸಲಾಗಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರ ವರದಿಯನ್ನು ಪರಿಶೀಲಿಸಿ ರಸ್ತೆ ಸುರಕ್ಷಾ ಸಮಿತಿಯಲ್ಲಿರುವ ಅಧಿಕಾರಿಗಳು ಹಾಗೂ ಮೋಟರ್ ವಾಹನ ಕಾಯ್ದೆ 1988 ಕಲಂ 115 ರಡಿಯಲ್ಲಿ ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮ 1989 ನಿಯಮ 221ಎ(5) ರಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸÀಂಚಾರ ವ್ಯವಸ್ತೆಯನ್ನು ಕಲ್ಪಿಸುವ ಹಿತದೃಷ್ಟಿಯಿಂದ ಬಾರಿ ವಾಹನಗಳನ್ನು ನಗರದ ಒಳಗಡೆ ಪ್ರವೇಶಿಸದಂತೆ ನಿಷೇಧಿಸುವುದು ಸೂಕ್ತವೆಂದು ಕಂಡು ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗರದಲ್ಲಿ ಸಂಚರಿಸುವ ಭಾರಿ ಸರಕು ವಾಹನಗಳನ್ನು ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಸಂಚರಿಸುವ ಮಾರ್ಗ:*
ಸಿರುಗುವ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬರುವ ಲಾರಿಗಳು ವಾಲ್ಮೀಕಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಮೋತಿ ಸರ್ಕಲ್, ಎ.ಪಿ.ಎಂ.ಸಿ ಸರ್ಕಲ್ ಮುಖಾಂತರ ಸಂಚರಿಸುವುದು.
ಬೆಂಗಳೂರು, ಚಳ್ಳಕೆರೆ ಕಡೆಯಿಂದ ಅನಂತಪುರ ಕಡೆಗೆ ಹೋಗುವ ಮತ್ತು ಬರುವ ಲಾರಿಗಳು, ಅನಂತರಪುರ ಬೈಪಾಸ್ ರಸ್ತೆ, ಪಿ.ಡಿ.ಹಳ್ಳಿ, ಮುಖಾಂತರ ಸಂಚರಿಸುವುದು.
ಬೆಂಗಳೂರು, ಚಳ್ಳಕೆರೆ ಕಡೆಯಿಂದ ಬಳ್ಳಾರಿ ಮುಖಾಂತರ ತೋರಣಗಲ್ಲು ಕಡಗೆ ಹೋಗುವ ಮತ್ತು ಬರುವ ಲಾರಿಗಳು ಹೊಸಪೇಟೆ ಬೈಪಾಸ್ ರಸ್ತೆ ಮುಖಾಂತರ ಸಂಚರಿಸುವುದು.
ಕರ್ನೂಲ್, ಆಲೂರು ಕಡೆಯಿಂದ ಬಳ್ಳಾರಿ ಮುಖಾಂತರ ತೋರಣಗಲ್ಲು ಕಡೆಗೆ ಹೋಗುವ ಮತ್ತು ಬರುವ ಲಾರಿಗಳು, ಛತ್ರಗುಡಿ, ಪಿ.ಡಿ.ಹಳ್ಳಿ, ಅನಂತಪುರ ಬೈ ಪಾಸ್ ರಸ್ತೆ, ಹೊಸಪೇಟೆ ರಸ್ತೆ ಬೈಪಾಸ್ ಮುಖಾಂತರ ಸಂಚರಿಸುವುದು.
ತೋರಣಗಲ್ಲು, ಕುಡುತಿನಿ ಕಡೆಯಿಂದ ಚಳ್ಳಕೆರೆ ಮಾರ್ಗವಾಗಿ ಬೆಂಗಳೂರು ಕಡೆಗೆ ಹೋಗುವ ಮತ್ತು ಬರುವ ಲಾರಿಗಳು ಹೊಸಪೇಟೆ ರಸ್ತೆಯ ಬೈಪಾಸ್ ಮುಖಾಂತರ ಸಂಚರಿಸುವುದು.
ತೋರಣಗಲ್ಲು, ಕುಡಿತಿನಿ ಕಡೆಯಿಂದ ಸಿರುಗುಪ್ಪ ಕಡೆಗೆ ಹೋಗುವ ಮತ್ತು ಬರುವ ಲಾರಿಗಳು, ಸುಧಾ ಕ್ರಾಸ್, ಒ.ಪಿ.ಡಿ ಸರ್ಕಲ್, ಇನ್ ಫ್ಯಾಂಟಿ ರಸ್ತೆ, ವಾಲ್ಮೀಕಿ ಸರ್ಕಲ್ ಮುಖಾಂತರ ಸಂಚರಿಸುವುದು.
ತೋರಣಗಲ್ಲು, ಕುಡಿತಿನಿ ಕಡೆಯಿಂದ ಮೋಕಾ, ಆಲೂರು, ಕರ್ನೂಲ್ ಕಡೆಗೆ ಹೋಗುವ ಲಾರಿಗಳು ಹೊಸಪೇಟೆ ಬೈಪಾಸ್, ಅನಂತಪುರ ಬೈಪಾಸ್, ಪಿಡಿ ಹಳ್ಳಿ, ಹಾಗೂ ಛತ್ತಗುಡಿ ಮುಖಾಂತರ ಸಂಚರಿಸುವುದು.
ಮೇಲ್ಕಂಡ ಭಾರಿ ವಾಹನಗಳ ಮಾರ್ಗ ಬದಲಾವಣೆಯ ಆದೇಶದಲ್ಲಿ ಸೂಚಿಸಿದಂತೆ ಪ್ರತಿದಿನ ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ