ಮಂಗಳವಾರ, ಡಿಸೆಂಬರ್ 12, 2023

ವಿದ್ಯುತ್ ವ್ಯತ್ಯಯ ಡಿ.14ರಂದು

ಬಳ್ಳಾರಿ,ಡಿ.12(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಬರುವ 110 ಕೆ.ವಿ ಮೋಕಾ- ಮೀನಹಳ್ಳಿ ಲಿಲೋ ತುರ್ತುಗಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಡಿ.14ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:* 110/11 ಕೆ.ವಿ ಮೋಕಾ ಉಪ ಕೇಂದ್ರದಿಂದ ಹೊರಡುವ ಎಲ್ಲ ಮಾರ್ಗಗಳು, 110/11 ಕೆ.ವಿ ಮೀನಹಳ್ಳಿ ಉಪ ಕೇಂದ್ರದಿಂದ ಹೊರಡುವ ಎಲ್ಲ ಮಾರ್ಗಗಳು, 33/11 ಕೆ.ವಿ ಯರ್ರಗುಡಿ ಉಪ ಕೇಂದ್ರದಿಂದ ಹೊರಡುವ ಎಲ್ಲ ಮಾರ್ಗಗಳು, ಜಾನಕಿ ಕಾಪೆರ್Çೀ ಪೆ.ಲಿ, ಬಾಸಾಯಿ ಸ್ಟೀಲ್ ಪೆ.ಲಿ, ಕ್ಲೀನ್ ಮ್ಯಾಕ್ಸ್ ಸೋಲಾರ್, ಕ್ಲೀನ್ ಸೋಲಾರ್, ಮೌರ್ಯ ಸಿಲಾಮ ಸೋಲಾರ್ ಐ.ಪಿ.ಪಿ ಇನ್ನೂ ಮುಂತಾದ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ