ಬುಧವಾರ, ಡಿಸೆಂಬರ್ 13, 2023

ವಸತಿ ಶಾಲೆ ನಡೆಸಲು ಸುಸಜ್ಜಿತ ಕಟ್ಟಡ ಬಾಡಿಗೆ ನೀಡಲು ಮಾಲೀಕರಿದ್ದಲ್ಲಿ ಸಂಪರ್ಕಿಸಿ

ಬಳ್ಳಾರಿ,ಡಿ.13(ಕರ್ನಾಟಕ ವಾರ್ತೆ): ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಾಂಧಿತತ್ವ ಆಧಾರಿತ ಬಾಲಕಿಯರ ವಸತಿ ಶಾಲೆ ನಡೆಸಲು ಕುರುಗೋಡು ಮತ್ತು ಕಂಪ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡವಿದ್ದಲ್ಲಿ ಬಾಡಿಗೆ ನೀಡಲು ಆಸಕ್ತ ಮಾಲೀಕರು ಸಂಪರ್ಕಿಸಬಹುದು ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಪ್ರಸ್ತುತ ಶಾಲೆಯು ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿದ್ದು, ಬಾಡಿಗೆ ಕಟ್ಟಡದಲ್ಲಿ 250 ಬಾಲಕಿಯರ ವಸತಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದರಿಂದ ಹಾಗೂ ಆಟದ ಮೈದಾನ ಇಲ್ಲದೇ ಇರುವುದರಿಂದ ಮಕ್ಕಳ ಸಮಗ್ರ ಬೆಳವಣಿಗೆಗೆ ಅಡಚಣೆಯಾಗುತ್ತಿದೆ. ಆದ್ದರಿಂದ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಸೂಕ್ತ ಸ್ಥಳಾವಕಾಶ ಹೊಂದಿರುವ ಹಾಗೂ ಶಿಕ್ಷಣ, ವಸತಿ ಹಾಗೂ ಇತರೆ ಅಗತ್ಯತೆಗಳನ್ನು ಪೂರೈಸಬಲ್ಲ ಬಾಡಿಗೆ ಕಟ್ಟಡ ಬೇಕಾಗಿರುತ್ತದೆ. ಕಟ್ಟಡದ ದಾಖಲೆ ಸಲ್ಲಿಸಬೇಕು. ಕುರುಗೋಡು ಅಥವಾ ಕಂಪ್ಲಿ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟಡವನ್ನು ಹೊಂದಿರುವ ಆಸಕ್ತ ಮಾಲೀಕರು, ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಪ್ರಾಂಶುಪಾಲರು, ಗಾಂಧಿತತ್ವ ಆಧಾರಿತ ವಸತಿ ಶಾಲೆ, ಕುರುಗೋಡು, ಬಳ್ಳಾರಿ ಜಿಲ್ಲೆ. ಮೊ.8970731698, ಈಮೇಲ್:kreismdrs510@gmail.com ಈ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ