ಸೋಮವಾರ, ಏಪ್ರಿಲ್ 7, 2025

ಕುರುಗೋಡು: ಏ.08 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಏ.07(ಕರ್ನಾಟಕ ವಾರ್ತೆ): ಕುರುಗೋಡು ಜೆಸ್ಕಾಂ ವ್ಯಾಪ್ತಿಯ ಕುರುಗೋಡು ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ 110/11ಕೆ.ವಿ ಕುರುಗೋಡು ವಿದ್ಯುತ್ ಉಪ-ಕೇಂದ್ರ‍್ರದ 11ಕೆ.ವಿ ಮಾರ್ಗಗಳಲ್ಲಿ ಏ.08 ರಂದು ಬೆಳಿಗ್ಗೆ 09 ರಿಂದ ಸಂಜೆ 04 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-1 ಕುರುಗೋಡು ಮಾರ್ಗದ ಕುರುಗೋಡು ನಗರ, ಯಲ್ಲಾಪುರ ಕ್ರಾಸ್. ಎಫ್-2 ಗೆಣಿಕೆಹಾಳ್ ಐಪಿ ಫೀಡರ್(ಎಫ್-14 ಫೀಡರ್) ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಬಸವಪುರ, ಅನ್ನಪೂರ್ಣೇಶ್ವರಿ ಕ್ಯಾಂಪ್, ವದ್ದಟ್ಟಿ, ವದ್ದಟ್ಟಿ ಕ್ರಾಸ್ ಕೃಷಿ ಪ್ರದೇಶಗಳು. ಎಫ್-5 ಸಿಂಧಿಗೇರಿ ಐ.ಪಿ ಫೀಡರ್ ಮಾರ್ಗದ ಬೈಲೂರು, ಮಲ್ಲೇಶ್ವರ ಕ್ಯಾಂಪ್, ಗೋಪಾಲಪುರ ಕ್ಯಾಂಪ್, ಗೂಳೆಪ್ಪ ಮಠದ ಕೃಷಿ ಪ್ರದೇಶಗಳು. ಎಫ್-7 ಬಾದನಹಟ್ಟಿ ಐ.ಪಿ ಫೀಡರ್ ಮಾರ್ಗದ ಬಾದನಹಟ್ಟಿ, ವದ್ದಟ್ಟಿ, ರ‍್ರಂಗಳಿ, ಸಿಂಧಿಗೇರಿ, ರ‍್ರಿಂಗಳಿ, ಮಾರುತಿ ಕ್ಯಾಂಪ್, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್ ಕೃಷಿ ಪ್ರದೇಶಗಳು. ಎಫ್-8 ಎಲ್.ಐ.ಎಸ್ ಎನ್.ಜೆ.ವೈ ಫೀಡರ್ ಮಾರ್ಗದ ಹೊಸಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ, ಕ್ಯಾದಿಗೆ ಹಾಳ್ ಕ್ರಾಸ್ ಹಾಗೂ ಇತರೆ ಗ್ರಾಮಗಳು. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಕುರುಗೋಡು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ