ಬುಧವಾರ, ಏಪ್ರಿಲ್ 2, 2025
ಕರಾಮುವಿ: ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬಳ್ಳಾರಿ.ಏ.02(ಕರ್ನಾಟಕ ವಾರ್ತೆ):
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2024-25 ನೇ ಜನವರಿ ಆವೃತ್ತಿಯ ದ್ವಿತೀಯ ಮತ್ತು ತೃತೀಯ ವರ್ಷಕ್ಕೆ ಪ್ರವೇಶಾತಿ ನವೀಕರಣ ಮಾಡಿಕೊಳ್ಳಲು ಬೋಧನಾ ಶುಲ್ಕ ಪಾವತಿಸಲು ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಎಸ್.ಡಬ್ಲುö್ಯ ಮತ್ತು ಅಂತಿಮ ಎಂ.ಎ, ಎಂ.ಕಾA, ಎಂ.ಎಸ್ಸಿ, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲೂö್ಯ., ಪದವಿಗಳ ಬೋಧನಾ ಶುಲ್ಕ ಪಾವತಿಸಲು ರೂ.400/- ದಂಡ ಶುಲ್ಕದೊಂದಿಗೆ ಏ.15 ರವರೆಗೆ ವಿಸ್ತರಿಸಲಾಗಿದೆ ಎಂದು ಕರಾಮುವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.ಎಚ್.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಮಾಹಿತಿಗೆ ಕರಾಮುವಿ ವೆಬ್‌ಸೈಟ್ www.ksoumysuru.ac.in ನ್ನು ವೀಕ್ಷಿಸುವುದು.
ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ಹಿಂಭಾಗ, ನಲ್ಲಚೆರವು ಪ್ರದೇಶ, ಬಳ್ಳಾರಿ ಅಥವಾ ಮೊ.7892597159 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ