ಸೋಮವಾರ, ಜುಲೈ 14, 2025

ಬಳ್ಳಾರಿ: ಯಶಸ್ವಿಯಾಗಿ ನಡೆದ ರಾಷ್ಟಿçÃಯ ಲೋಕ್-ಅದಾಲತ್

ಬಳ್ಳಾರಿ,ಜು.14(ಕರ್ನಾಟಕ ವಾರ್ತೆ): ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ನಡೆದ ರಾಷ್ಟಿçÃಯ ಲೋಕ್-ಅದಾಲತ್ ಯಶಸ್ವಿಯಾಗಿ ನಡೆದಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ತಿಳಿಸಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರ, ವಕೀಲರ, ಕಕ್ಷಿದಾರರ, ಸಾರ್ವಜನಿಕರ ಮತ್ತು ಸರ್ಕಾರಿ ಅಧಿಕಾರಿಗಳ ಸಹಯೋಗದಲ್ಲಿ ರಾಷ್ಟಿçÃಯ ಲೋಕ್-ಅದಾಲತ್ ಯಶಸ್ವಿಯಾಗಿ ನಡೆದಿವೆ. ಲೋಕ್-ಅದಾಲತ್‌ನಲ್ಲಿ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ದಾವೆಗಳು, ಚೆಕ್ ಬೌನ್ಸ್ ಪ್ರಕರಣಗಳು, ಹಣ ವಸೂಲಾತಿ ದಾವೆಗಳು, ಮೋಟರ್ ಅಪಘಾತ ಪರಿಹಾರ ಪ್ರಕರಣಗಳು, ನೌಕರರ ಪರಿಹಾರ ಪ್ರಕರಣಗಳು, ವಿದ್ಯುತ್ ಶಕ್ತಿ ಕಾಯ್ದೆಯ ಪ್ರಕರಣಗಳು, ಪಾಲು ವಿಭಾಗ ದಾವೆಗಳು, ವೈವಾಹಿಕ ಅಥವಾ ಕೌಟುಂಬಿಕ ಪ್ರಕರಣಗಳು, ಮೋಟಾರ್ ವಾಹನ ಪ್ರಕರಣಗಳು, ಸಿವಿಲ್ ಪ್ರಕರಣಗಳು ಹಾಗೂ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ರಾಜಿ ಸಂಧಾನದ ಮೂಲಕ ತೀರ್ಮಾನಿಸಲಾಗಿದೆ. ಇದರಿಂದ ಕಕ್ಷಿದಾರರಲ್ಲಿ ಪರಸ್ಪರ ಬಾಂಧವ್ಯ ಮುಂದುವರೆದು, ಹಣ ಮತ್ತು ಸಮಯ ಉಳಿತಾಯವಾಗುತ್ತವೆ ಹಾಗೂ ಸಮಾಜದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಸಾಮರಸ್ಯ ಜೀವನ ಹಾಗೂ ಸಹಬಾಳ್ವೆ ನಡೆಸಲು ಸಹಾಯವಾಗುತ್ತದೆ. *ರಾಷ್ಟಿçÃಯ ಲೋಕ್-ಅದಾಲತ್‌ನ ಸಂಕ್ಷಿಪ್ತ ವರದಿ:* 2025 ನೇ ಸಾಲಿನ ಜು.12 ರಂದು ನಡೆದ ಲೋಕ್-ಅದಾಲತ್‌ನಲ್ಲಿ 16,424 ಬಾಕಿ ಪ್ರಕರಣಗಳು ಮುಕ್ತಾಯಗೊಳಿಸಲಾಗಿದ್ದು, ಒಟ್ಟು ರೂ.34,31,97,228 ಪರಿಹಾರವಾಗಿ ಮೊತ್ತವನ್ನು ಕೊಡಲಾಗಿರುತ್ತದೆ. ಹಾಗೂ 8,59,362 ವಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡಿದ್ದು, ಅವುಗಳಿಂದ ರೂ.31,33,76,853 ಬ್ಯಾಂಕ್ ಮತ್ತು ಸರ್ಕಾರಿ ಇಲಾಖೆಯ ಖಾಜನೆಗೆ ಪರಿಹಾರದ ಮೊತ್ತ ಜಮೆ ಆಗಿರುತ್ತದೆ. ಕೌಟುಂಬಿಕ ಸಮಸ್ಯೆಯ ಪ್ರಕರಣಗಳಲ್ಲಿ 11 ಜೋಡಿಗಳು ರಾಜಿ ಸಂದಾನದ ಮೂಲಕ ಗಂಡ-ಹೆAಡತಿ ಒಂದಾಗಿದ್ದಾರೆ. ಲೋಕ್-ಅದಾಲತ್ ಕುರಿತು ಸಾರ್ವಜನಿಕರು ಹೆಚ್ಚಿನ ಅರಿವು ಹೊಂದಿ, ತಮ್ಮ ವ್ಯಾಜ್ಯಗಳಿದ್ದಲ್ಲಿ ಸಕಾಲದಲ್ಲಿ ಬಗೆಹರಿಸಿಕೊಳ್ಳಲು ರಾಷ್ಟಿçÃಯ ಲೋಕ್-ಅದಾಲತ್ ಸಹಕಾರಿಯಾಗಿದೆ ಹಾಗೂ ಪ್ರದಿನ ಎಲ್ಲಾ ನ್ಯಾಯಾಲಯಗಳಲ್ಲಿ ರಾಜಿ ಸಂಧಾನ ಮಾಡುವ ಸಲುವಾಗಿ ಬೈಠಕ್‌ಗಳು ನಡೆಯುತ್ತವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ