ಬುಧವಾರ, ಅಕ್ಟೋಬರ್ 29, 2025
ಡಿ.01 ರಂದು ಸಾರ್ವಜನಿಕ ಪರಿಸರ ಆಲಿಕೆ ಸಭೆ
ಬಳ್ಳಾರಿ,ಅ.29(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ತಾರಾನಗರ ಗ್ರಾಮದ ಒಟ್ಟು 41.729 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ವಾರ್ಷಿಕ 25 ಮಿಲಿಯನ್ ಟನ್ ಸಾಮರ್ಥ್ಯದ (ಖನಿಜ ಥ್ರೋಪುಲ್) ಹೈ ಸಿಲಿಸಿಯಸ್ ಕಬ್ಬಿಣದ ಅದಿರು (ಬಿ.ಹೆಚ್.ಕ್ಯೂ) ಅನ್ನು ಸಂಸ್ಕರಿಸುವ ಮೂಲಕ ವಾರ್ಷಿಕ 10 ಮಿಲಿಯನ್ ಟನ್ ಸಂಸ್ಕರಿಸಿದ ಕಬ್ಬಿಣದ ಅದಿರನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಗ್ರೀನ್-ಫೀಲ್ಡ್ ಹೈ ಸೊಲಿಸಿಯೆಸ್ ಕಬ್ಬಿಣದ ಅದಿರು (ಬಿ.ಹೆಚ್.ಕ್ಯೂ) ಸಂಸ್ಕಾರಣಾ ಘಟಕ ಮತ್ತು ಸಂಬAಧಿತ ಮೂಲ ಸೌಕರ್ಯವನ್ನು ಸ್ಥಾಪಿಸಲು ಯೋಜನಾ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಸಂಬAಧ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ಅಧ್ಯಕ್ಷತೆಯಲ್ಲಿ ಡಿ.01 ರಂದು ಬೆಳಿಗ್ಗೆ 11 ಗಂಟೆಗೆ ಸಂಡೂರು ತಾಲ್ಲೂಕಿನ ತಾರಾನಗರ ಗ್ರಾಮದ ಸರ್ವೆ ನಂ 6/4, 46/2, 7/4, 47/ಬಿ, 47/ಸಿ, 47/ಡಿ ಯೋಜನಾ ಪ್ರದೇಶದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಗ್ರಾಮಸ್ಥರು, ಸುತ್ತಮುತ್ತಲಿನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ, ಅಹವಾಲು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ