ಶುಕ್ರವಾರ, ಅಕ್ಟೋಬರ್ 31, 2025
ವಿಜಯನಗರ ಶ್ರೀಕೃಷ್ಣದೇವರಾಯ ವಿವಿ: ಪ್ರಸಾರಾಂಗದ ಪುಸ್ತಕಗಳಿಗೆ ಶೇ.20ರಷ್ಟು ವಿಶೇಷ ರಿಯಾಯಿತಿ
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗವು ತಮ್ಮ ಪ್ರಕಟಣೆಯ ಪುಸ್ತಕಗಳಿಗೆ ನವೆಂಬರ್ ತಿಂಗಳಲ್ಲಿ ಪುಸ್ತಕದ ಮುಖಬೆಲೆಯ ಶೇ.20 ರಷ್ಟು ವಿಶೇಷ ರಿಯಾಯತಿ ನೀಡಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಅವರು ತಿಳಿಸಿದ್ದಾರೆ.
ವಿವಿಯ ಪ್ರಸಾರಾಂಗವು ಇಲ್ಲಿಯವರೆಗೆ 40 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದು, ಪ್ರಚಾರೋಪನ್ಯಾಸ ಮಾಲೆ, ವಿಶೇಷ ಪುಸ್ತಕಗಳು (ಪಠ್ಯಪುಸ್ತಕಗಳನ್ನು ಹೊರತುಪಡಿಸಿ) ಸೇರಿದಂತೆ ಈ ಕೃತಿಗಳು ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕೆಂಬ ಉದ್ದೇಶದಿಂದ ಪುಸ್ತಕಗಳ ಮೇಲೆ ಶೇ.20 ರಿಯಾಯತಿಯನ್ನು ವಿವಿಯು ಘೋಷಿಸಿದೆ.
ಪುಸ್ತಕ ಮಾರಾಟಗಾರರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು, ಜನಸಾಮಾನ್ಯರು ಈ ವಿಶೇಷ ರಿಯಾಯಿತಿಯ ಪ್ರಯೋಜನವನ್ನು ಪಡೆದುಕೊಳ್ಳಲು ವಿವಿಯ ಪ್ರಸಾರಾಂಗಕ್ಕೆ ಭೇಟಿ ಅಥವಾ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ