ಗುರುವಾರ, ಅಕ್ಟೋಬರ್ 23, 2025
ವಿದ್ಯುತ್ ಮಾಪಕವನ್ನು 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಲು ಜೆಸ್ಕಾಂ ಸೂಚನೆ
ಬಳ್ಳಾರಿ,ಅ.23(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಉಪವಿಭಾಗ-1 ಜೆಸ್ಕಾಂ ವ್ಯಾಪ್ತಿಯಲ್ಲಿ ಕಂಪನಿಯ ನಿಯಮಾನುಸಾರ ಎಲ್ಲಾ ಸ್ಥಾವರದಲ್ಲಿರುವ ಮೀಟರ್‌ಗಳನ್ನು ಆಪ್ಟಿಕಲ್ ಪ್ರೋಬ್ ಡಿವೈಸ್ ಮೂಲಕವೇ ರೀಡಿಂಗ್ ಮಾಡಬೇಕಾಗಿದ್ದು, ವಿದ್ಯುತ್ ಗ್ರಾಹಕರು ತಮ್ಮ ಸ್ಥಾವರದ ವಿದ್ಯುತ್ ಮಾಪಕವನ್ನು ಕಡ್ಡಾಯವಾಗಿ ನೆಲದಿಂದ 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಬೇಕು.
ವಿದ್ಯುತ್ ಮಾಪಕಗಳು ಗೋಚರಿಸುವ ಹಾಗೂ ಓದಲು ಅನುಕೂಲವಾಗುವ ಸ್ಥಳದಲ್ಲಿ ಇರಬೇಕು. ಮೀಟರ್ ಓದುವವರಿಗೆ ಸ್ಥಳವಿಲ್ಲದಿದ್ದಲ್ಲಿ ಸ್ಥಳವಿರುವ ಜಾಗದಲ್ಲಿ ಇರಿಸಬೇಕು. ಅ.25 ರೊಳಗಾಗಿ ನಿಗದಿತ ಎತ್ತರದ ಜಾಗದಲ್ಲಿ ಅಳವಡಿಸಿಕೊಳ್ಳಬೇಕು.
ಈ ನಿಯಮ ಪಾಲನೆ ಮಾಡದಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ