ಶುಕ್ರವಾರ, ಅಕ್ಟೋಬರ್ 24, 2025

ಬಳ್ಳಾರಿ: ವಕ್ಫ್ ಸಂಸ್ಥೆಯ ದಾಖಲೆಗಳನ್ನು ಯುಡಬ್ಲೂö್ಯಎಂಇಇಡಿ ಪೋರ್ಟಲ್‌ನಲ್ಲಿ ಅಪ್ ಲೋಡ್ ಮಾಡಲು ಸೂಚನೆ

ಬಳ್ಳಾರಿ,ಅ.24(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗಳು ವಕ್ಫ್ ಕಾಯ್ದೆ ಕಲಂ 32(2),(ಡಿ) ಅಡಿ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ (ಯುಡಬ್ಲೂö್ಯಎಂಇಇಡಿ) ಪೋರ್ಟಲ್‌ನಲ್ಲಿ ಮೇಕರ್ ಆಗಿ ನೋಂದಣಿ ಮತ್ತು ವಕ್ಫ್ ಸಂಸ್ಥೆಯ ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ 364ನೇ(ಎ) ರಾಜ್ಯ ವಕ್ಫ್ ಮಂಡಳಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ರಾಜ್ಯ ವಕ್ಫ್ ಮಂಡಳಿಯ ಎಲ್ಲಾ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು/ನಿರ್ವಹಣಾ ಸಮಿತಿಗಳು/ಆಡಳಿತಾಧಿಕಾರಿಗಳು/ಕೇರ್ ಟೇಕರ್‌ಗಳಿಗೆ ತಕ್ಷಣವೇ ಯುಡಬ್ಲೂö್ಯಎಂಇಇಡಿ ಪೋರ್ಟ್ಲ್‌ನಲ್ಲಿ ಮೇಕರ್ ಆಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಯುಡಬ್ಲೂö್ಯಎAಇಇಡಿ ಕಾಯ್ದೆ, 2025 ಮತ್ತು ಅದರ ನಿಯಮಗಳಡಿ ನಿಗದಿಪಡಿಸಿದ ದಾಖಲೆಗಳನ್ನು 30 ದಿನಗಳೊಳಗಾಗಿ ಅಪ್ಲೋಡ್ ಮಾಡಬೇಕು ಹಾಗೂ ಎಲ್ಲಾ ಅಪ್ಲೋಡ್‌ಗಳು ಪೋರ್ಟಲ್ ನಲ್ಲಿ ಲಭ್ಯವಿರುವ ಸ್ವರೂಪ ಮತ್ತು ಫೈಲ್ ಗಾತ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಗ್ಗೆ ಖಚಿತಪಡಿಸಿಕೊಂಡು ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಈ ಪರಿಶೀಲನೆ ಮತ್ತು ಅನುಮೋದನೆಗಾಗಿ ಯುಡಬ್ಲೂö್ಯಎಂಇಇಡಿ ಪೋರ್ಟಲ್‌ನಲ್ಲಿ ವಕ್ಫ್ ಅಧಿಕಾರಿಯನ್ನು ಪರಿಶೀಲಕ(ವೆರಿಫೈಯರ್), ವಿಭಾಗೀಯ ವಕ್ಫ್ ಅಧಿಕಾರಿ, ಸಹಾಯಕ ಕಾರ್ಯದರ್ಶಿ ಆಡಳಿತ, ಅಪರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಅನುಮೋದಕ(ಅಪ್ರೂವರ್) ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅಧಿಕೃತ ವಕ್ಫ್ ಅಧಿಕಾರಿಗಳು ಏಳು ದಿನದೊಳಗೆ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ಅಧಿಕೃತ ಅನುಮೋದಿಸುವ ಅಧಿಕಾರಿಗಳು ಏಳು ದಿನದೊಳಗೆ ಕ್ರಮ ಕೈಗೊಂಡು ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಡಿಸೆಂಬರ್ 05 ರೊಳಗೆ ಸಂಪೂರ್ಣ ಅಪ್‌ಲೋಡ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ವಕ್ಫ್ ಕಾಯ್ದೆ ಮತ್ತು ಸಂಬAಧಿತ ನಿಯಮಗಳಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ