ಶನಿವಾರ, ಅಕ್ಟೋಬರ್ 18, 2025

ಡಿ.07 ರಂದು ಮಾಜಿ ಸೈನಿಕರ ಕುಂದು ಕೊರತೆ ನಿವಾರಣೆ ಸಭೆ

ಬಳ್ಳಾರಿ,ಅ.18(ಕರ್ನಾಟಕ ವಾರ್ತೆ): ಬೆಳಗಾವಿ ನಗರದ ಮರಾಠಾ ಲೈಟ ಇನಫಂಟ್ರಿ, ಶಿವಾಜಿ ಸ್ಟೇಡಿಯಂನಲ್ಲಿ ಡಿ.07 ರಂದು ಬೆಳಿಗ್ಗೆ 06 ರಿಂದ ಸಂಜೆ 06 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳ ಕುಂದು ಕೊರತೆ ನಿವಾರಣಾ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮಾಜಿ ಸೈನಿಕರ ನಿವೃತ್ತಿ ಪಿಂಚಣಿ, ಕುಟುಂಬ ಪಿಂಚಣಿ, ಸ್ಪರ್ಶ ಹಾಗೂ ಇಸಿಎಚ್‌ಎಸ್ ಸಂಬAಧಿಸಿದ ಸಮಸ್ಯೆಗಳು ಕುರಿತು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ತಮ್ಮ ಸಮಸ್ಯೆ ಕುರಿತು ಹೆಸರುಗಳನ್ನು ನೊಂದಾಯಿಸಿಕೊAಡು, ನೋಂದಣಿ ಸಂಖ್ಯೆಯನ್ನು ಪಡೆಯಬೇಕಾಗಿರುತ್ತದೆ. ನೊಂದಣಿ ಮಾಡಲು ಬಯಸುವವರು ತಮ್ಮ ಕುಂದು ಕೊರತೆಗಳ ಅರ್ಜಿ ಮತ್ತು ಅದಕ್ಕೆ ಸಂಭAಧಿಸಿದ ದಾಖಲೆಗಳನ್ನು ಮೊಬೈಲ್ (ವಾಟ್ಸಾಪ್) ಸಂಖ್ಯೆ 8317350584 ಅಥವಾ greatgorill@nic.in ಮೂಲಕ ಅಪ್‌ಲೋಡ್ ಮಾಡಬಹುದು. ಶಿಬಿರದಲ್ಲಿ ಬೆಳಗಾವಿ ಜಿಲ್ಲೆ ಮತ್ತು ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ ಸಂಬAಧಿಸಿದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರುಗಳು ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅರ್ಜಿ ಮತ್ತು ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ಮೊಬೈಲ್ (ವಾಟ್ಸಾಪ್) ಸಂಖ್ಯೆ 8317350584 ಗೆ ಅಪ್‌ಲೋಡ್ ಮಾಡಿದ ವಿವರವನ್ನು ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ದೂ.0836-2440176 ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಅವರು ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ