ಮಂಗಳವಾರ, ಅಕ್ಟೋಬರ್ 28, 2025
ಅ.31 ರಂದು ಮ್ಯಾರಥಾನ್ ಓಟ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಭಾರತ ಸ್ವಾತಂತ್ರö್ಯ ಹೋರಾಟಗಾರರು ಮತ್ತು ಭಾರತದ ಏಕೀಕರಣದ ಶಿಲ್ಪಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನದ ವಾರ್ಷಿಕೋತ್ಸವದ ನಿಮಿತ್ತ ರಾಷ್ಟಿçÃಯ ಐಕ್ಯತಾ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ನಾಗರಿಕರ ಸುರಕ್ಷತೆ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅ.31 ರಂದು ಬೆಳಿಗ್ಗೆ 07 ಗಂಟೆಗೆ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ರನ್-ಫಾರ್-ಯುನಿಟಿ (ಏಕತೆಗಾಗಿ ಓಟ) ಮ್ಯಾರಥಾನ್ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಓಟವು ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಆರಂಭಗೊAಡು ಇಂದಿರಾ ವೃತ್ತ- ನೂತನ ಜಿಲ್ಲಾಡಳಿತ ಭವನ- ಎಂ.ಜಿ ರಸ್ತೆ- ಅನಂತಪುರ ಬೈಪಾಸ್ ಕ್ರಾಸ್ ನಿಂದ ಮರಳಿ ಎಂ.ಜಿ ವೃತ್ತ- ಇಂದಿರಾ ವೃತ್ತ- ಎಸ್.ಎನ್.ಪೇಟೆ ಕ್ರಾಸ್(ಕೂಲ್ ಕಾರ್ನರ್)- ಡಿಎಆರ್ ಪೊಲೀಸ್ ಕವಾಯತು ಮೈದಾನದವರೆಗೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ