ಶನಿವಾರ, ಅಕ್ಟೋಬರ್ 18, 2025

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಡಾ.ವಿ.ಲೋಕೇಶ್ ವಿದೇಶ ಪ್ರಯಾಣ

ಬಳ್ಳಾರಿ,ಅ.18(ಕರ್ನಾಟಕ ವಾರ್ತೆ): ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತç ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾದ ಡಾ.ವಿ.ಲೋಕೇಶ್ ಅವರು ಅ.21 ರಿಂದ 26 ರವರೆಗೆ ಇಂಡೋನೇಷ್ಯಾದಲ್ಲಿ ಜರುಗಲಿರುವ “ಐಐಸಿಎಂಎ-2025 ಅಂತರಾಷ್ಟಿçÃಯ ಸಮ್ಮೇಳನ”ದ ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ವಿದೇಶ ಪ್ರಯಾಣ ಮಾಡಲಿದ್ದಾರೆ. ಪ್ರತಿಷ್ಠಿತ 37ನೇ ಆವೃತ್ತಿಯ ‘ಇಂಡೊ ಎಂಎಸ್’ ಅಂತರಾಷ್ಟಿçÃಯ ಸಮ್ಮೇಳನವು ಇಂಡೋನೇಷ್ಯಾದ ಈಸ್ಟ್ ಜಾವಾದಲ್ಲಿರುವ ಜಂಬೆರ್ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಆಯೋಜಿಸಲಾಗಿದೆ. ಜಂಬೆರ್ ವಿಶ್ವವಿದ್ಯಾಲಯದ ಜಾಂಗ್‌ಜಿಯಾನ್ ಮೆಥಮೆಟಿಕಲ್ ಸೊಸೈಟಿ ಮತ್ತು ಸಿಜಿಎಎನ್‌ಟಿ ರಿಸರ್ಚ್ ಗ್ರೂಪ್ ಸಹಭಾಗಿತ್ವದಲ್ಲಿ ಪ್ರತಿವರ್ಷ ಸಮ್ಮೇಳನವನ್ನು ಆಯೋಜಿಸಲಾತ್ತದೆ. ಟರ್ಕಿ, ಚೀನಾ, ದಕ್ಷಿಣ ಕೊರಿಯಾ, ಫ್ರಾನ್ಸ್ ದೇಶಗಳ ಖ್ಯಾತ ಗಣಿತಶಾಸ್ತç ಪ್ರಾಧ್ಯಾಪಕರುಗಳು ಮುಖ್ಯ ಭಾಷಣಕಾರರಾಗಿ ಮತ್ತು ಸುಮಾರು 50ಕ್ಕೂ ಅಧಿಕ ದೇಶಗಳ ಶೈಕ್ಷಣಿಕ ವಲಯದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿಷ್ಠಿತ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಲಿರುವ ಡಾ.ವಿ.ಲೋಕೇಶ್ ಅವರಿಗೆ ವಿವಿಯ ಕುಲಪತಿಗಳಾದ ಪ್ರೊ.ಎಂ.ಮುನಿರಾಜು, ಕುಲಸಚಿವರಾದ ಸಿ.ನಾಗರಾಜು, ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ ಸಾಲಿ, ವಿತ್ತಾಧಿಕಾರಿಗಳಾದ ನಾಗರಾಜ, ವಿವಿಯ ಸಿಬ್ಬಂದಿ ವರ್ಗ ಹಾಗೂ ಅವರ ಹಿತೈಷಿಗಳು, ಬಂಧು-ಮಿತ್ರರು ಶುಭ ಕೋರಿದ್ದಾರೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ