ಶನಿವಾರ, ಅಕ್ಟೋಬರ್ 18, 2025

ಸಂಡೂರು: ದೇಶಿ ಕೋಳಿ ಮರಿಗಳ ವಿತರಣೆಗಾಗಿ ಗ್ರಾಮೀಣ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

ಬಳ್ಳಾರಿ,ಅ.18(ಕರ್ನಾಟಕ ವಾರ್ತೆ): ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ 05 ವಾರದ ದೇಶಿ ಕೋಳಿ ಮರಿಗಳನ್ನು ವಿತರಿಸಲು ಗ್ರಾಮೀಣ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಭಾಗಧ ಪರಿಶಿಷ್ಟ ಜಾತಿ ಶೇ.17, ಪರಿಶಿಷ್ಟ ಪಂಗಡ ಶೇ.07, ಹಿಂದುಳಿದ ವರ್ಗ ಶೇ.32 ಮತ್ತು ಸಾಮನ್ಯ ವರ್ಗ ಶೇ.44 ರ ಶೇಕಡವಾರು 05 ವಾರದ ದೇಶಿ ಕೋಳಿ ಮರಿಗಳನ್ನು ತಲಾ-20 ರಂತೆ ಒಟ್ಟರೆ ಸಂಡೂರು ತಾಲ್ಲೂಕಿನ 99 ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ಅರ್ಜಿಗಳನ್ನು ಆಯಾ ತಾಲ್ಲೂಕಿನ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಪಡೆದು ಸಂಬAಧಿಸಿದ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 04 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಂಡೂರಿನ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ (ಆಡಳಿತ) ಹಾಗೂ ಆಯಾ ತಾಲ್ಲೂಕಿನ ಪಶುವೈದ್ಯಕೀಯ ಸಂಸ್ಥೆ ಅಥವಾ ದೂ. 08395-260338 ಗೆ ಸಂಪರ್ಕಿಸಬಹುದು. ಆಸಕ್ತ ಗ್ರಾಮೀಣ ರೈತ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಡೂರಿನ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ