ಶನಿವಾರ, ಅಕ್ಟೋಬರ್ 18, 2025

ಬಿಎಸ್‌ಎನ್‌ಎಲ್: “ದೀಪಾವಳಿ ಬೊನಾಂಸಾ” ಸೇವೆ ಪಡೆದುಕೊಳ್ಳಿ

ಬಳ್ಳಾರಿ,ಅ.18(ಕರ್ನಾಟಕ ವಾರ್ತೆ): ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಸಾರ್ವಜನಿಕ ದೂರ ಸಂಪರ್ಕ ಸೇವಾ ಸಂಸ್ಥೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಅ.15 ರಿಂದ ನ.15 ರವರೆಗೆ ಒಂದು ತಿಂಗಳ ಸೀಮಿತ ಅವಧಿಗೆ ಮಾತ್ರ “ದೀಪಾವಳಿ ಬೊನಾಂಸಾ” ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್, ಉಚಿತ ಸಿಮ್ ಪಡೆಯಬಹುದು (30 ದಿನಗಳಿಗೆ ಮಾತ್ರ). ಈ ಸೌಲಭ್ಯವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ